ಪೈವಳಿಕೆ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುದೆಂಬಳದಲ್ಲಿ ಸಂಕವೊAದು ಶೋಚನೀಯವಸ್ಥೆಯಲ್ಲಿದ್ದು, ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಕನಿಯಾಲ-ಬಳ್ಳೂರು ಲೊಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಸುದೆಂಬಳದಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಸಂಕ ಶೋಚನೀಯವಸ್ಥೆಯಲ್ಲಿದೆ. ಸಂಕದ ಅಡಿ ಭಾಗ ಕಾಂಕ್ರೀಟ್ ಎದ್ದು ಕಬ್ಬಿಣದ ಸಲಾಕೆ ಗೋಚರಿಸುತ್ತಿದೆ. ಸಂಕದಿAದ ಘನಪಾತ್ರದ ಒಂದೇ ವಾಹನ ಮಾತ್ರವೇ ಸಂಚರಿಸಲು ಸ್ಥಳವಕಾಶ ಇದ್ದು ಇದರಿಂದ ಎರಡು ಭಾಗದಿಂದ ಬರುವ ವಾಹನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿರುವುದಾಗಿ ದೂರಲಾಗಿದೆ. ಮಾತ್ರವಲ್ಲ ಸಂಕದ ಒಂದು ಬದಿಗೆ ನಿರ್ಮಿಸಲಾದ ಕಬ್ಬಿಣದ ಬೇಲಿ ವಾಹನ ಡಿಕ್ಕಿಯಾಗಿ ಹಾನಿಗೊಂಡಿದೆ. ಈ ರಸ್ತೆಯಿಂದ ದಿನನಿತ್ಯ ಬಸ್ ಸಹಿತ ನೂರಾರು ವಾಹನ ಸಂಚಾರ ನಡೆಸುತ್ತಿದ್ದು, ಸವಾರರಲ್ಲಿ ಆತಂಕ ಹೆಚ್ಚಾಗಿದೆ. ಶೋಚನೀಯ ಹಾಗೂ ಇಕ್ಕಟ್ಟಾದ ಈ ಸಂಕವನ್ನು ಕೆಡವಿ ಹೊಸ ಸಂಕ ನಿರ್ಮಿಸಬೇಕೆಂದು ಊರವರು ಆಗ್ರಿಸಿದ್ದಾರೆ. ಸಂAಬದಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿಸಬೇಕೆಂದು ಒತ್ತಾಯಿಸಿದ್ದಾರೆ.