ಪರಂಬಳ ದುರ್ಗಾಶಕ್ತಿ ಕುಣಿತ ಭಜನಾ ತಂಡದ ವತಿಯಿಂದ ಅಭಿನಂದನೆ ಸಭೆ ಜೂ.೨ರಂದು

Share with

ಉಪ್ಪಳ: ದುರ್ಗಾಶಕ್ತಿ ಕುಣಿತ ಭಜನಾ ತಂಡ ಪರಂಬಳ, ಕಯ್ಯಾರು ಇದರ ವತಿಯಿಂದ  ಕುಣಿತ ಭಜನೆಗೆ  ಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೮೦ಕ್ಕಿಂತ ಮೇಲ್ಪಟ್ಟು ಅಂಕವನ್ನು ಪಡೆದ ಭಜಕ, ಭಜಕಿಯರನ್ನು ಅಭಿನಂದಿಸುವ ಕಾರ್ಯಕ್ರಮ  ೦೨-೦೬-೨೦೨೪  ಬೆಳಿಗ್ಗೆ ೧೦ಗಂಟೆಗೆ ಕಯ್ಯಾರು ಭಾರತ ಮಾತಾ ಸೇವಾ ಟ್ರಸ್ಟ್ನ ಕಾರ್ಯಾಲಯದಲ್ಲಿ ನಡೆಯಲಿದೆ. ಬೆಳಿಗ್ಗೆ ೧೦ಕ್ಕೆ ದೀಪ ಪ್ರಜ್ವಲನೆ, ೧೦.೫ರಿಂದ ೧೦.೨೦ರ ತನಕ ಕುಣಿತ ಭಜನೆ, ೧೦.೨೫ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ರಾಜೀವಿ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸುವರು. ಮಕ್ಕಳ ಸಹಾಯವಾಣಿ ಸಂಪನ್ಮೂಲ ಮಹಿಳೆ ರಮ್ಯ .ಬಿ ಸೀತಾಂಗೋಳಿ ಉದ್ಘಾಟಿಸುವರು. ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ರೂವಾರಿ, ಅಧ್ಯಪಕರು ವಿಠಲ ನಾಯಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಮಾಡುವರು. ಕಾಸರಗೋಡು ಸರಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ  ಡಾ.ಆಶಾಲತಾ ಚೇವಾರು, ಮಾಜಿ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.


Share with

Leave a Reply

Your email address will not be published. Required fields are marked *