ಉಪ್ಪಳ: ಸಿ.ಐ ಟಿ.ಯು ಸ್ಥಾಪಕ ದಿನಾಚರಣೆ ನಿನ್ನೆ ಸುಭಾಸ್ನಗರದಲ್ಲಿ ೩೦-೫-೨೦೨೪ರಂದು ಆಚರಿಸಲಾಯಿತು. ಸುಬ್ರಹ್ಮಣ್ಯ ಆಚಾರಿ ಬೊಳ್ಳಾರು ದ್ವಜಾರೋಹಣಗೈದರು. ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಾಕ್ಷೆ ಬೇಬಿ ಶೆಟ್ಟಿ ಕಯ್ಯಾರು ಉದ್ಘಾಟಿಸಿದರು. ಸತೀಶ್ ಕನ್ನಟಿಪಾರೆ ಅಧ್ಯಕ್ಷತೆ ವಹಿಸಿದರು. ಸಿ.ಐ.ಟಿ.ಯು ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬೊಳ್ಳಾರು ಸ್ವಾಗತಿಸಿ, ಪ್ರವೀಣ್ ಕುಮಾರ್ ಕನ್ನಟಿಪಾರೆ ವಂದಿಸಿದರು. ಈ ಕಾರ್ಯಕ್ರಮದ ಬಳಿಕ ಬೇಕೂರು ಸರಕಾರಿ ಶಾಲಾ ತರಗತಿಗಳ ಕೊಠಡಿಗಳನ್ನು ಹಾಗೂ ಪರಿಸರವನ್ನು ಶುಚೀಕರಣಗೊಳಿಸಲಾಯಿತು