ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ವಿವಿಧೆಡೆಗಳಲ್ಲಿ ಬೃಹತ್ ಮರಗಳ ರೆಂಬೆ ರಸ್ತೆಗೆ ಭಾಗಿ ವಾಹನ ಸಂಚಾರಕ್ಕೆ ಅಪಾಯ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಬೇಕೂರು ಶಾಲಾ ಪರಿಸರದ ಬಸ್ ನಿಲ್ದಾಣ ಸಮೀಪ, ಅಟ್ಟೆಗೋಳಿ ಮೊದಲಾದ ಕಡೆಗಳಲ್ಲಿ ಬೃಹತ್ ಮರಗಳ ರೆಂಬೆಗಳು ರಸ್ತೆಗೆ ಭಾಗಿಕೊಂಡಿದ್ದು, ಸಾರ್ವಜನಿಕರಲ್ಲಿ ಭೀತಿಗೆ ಕಾರಣವಾಗಿದೆ. ಬಸ್ ಸಹಿತ ಘನಗಾತ್ರದ ವಾಹನಗಳಿಗೆ ಈ ರೆಂಬೆಗಳು ಬಡಿಯುತ್ತಿರುವುದಾಗಿ ದೂರಲಾಗಿದೆ. ದಿನನಿತ್ಯ ನೂರಾರು ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ಜನರು ನಡೇದು ಹೋಗುತ್ತಿದ್ದು, ಅಲ್ಲದೆ ಈ ಪರಿಸರದಿಂದ ವಿದ್ಯುತ್ ತಂತಿ ಹಾದುಹೋಗಿದೆ. ಮಳೆ ಗಾಳಿಗೆ ಮರ ಮುರಿದು ಬಿದ್ದಲ್ಲಿ ದುರಂತ ತಪ್ಪಿದ್ದಲ್ಲವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕೈಕಂಬ-ಬಾಯಾರು ರಸ್ತೆ ಉದ್ದಕ್ಕೂ ಅಲ್ಲಲ್ಲಿ ಅಪಾಯಕ್ಕೆ ಕಾರಣವಾಗಿದ್ದ ಮರ ಸಹಿತ ರೆಂಬೆಗಳನ್ನು ಈ ಹಿಂದೆ ರಸ್ತೆ ನಿರ್ಮಾಣದ ವೇಳೆ ತೆರವುಗೊಳಿಸಲಾಗಿದೆ. ಇದೀಗ ಬಾಕಿ ಉಳಿದ ರೆಂಬೆಯನ್ನು ತೆರವುಗೊಳಿಸಿ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.