ಬಂಟ್ವಾಳ ತಾಲೂಕಿನ ಶಾಲೆ ಕೆಲಿಂಜದಲ್ಲಿ 2024-2025 ನೇ ಸಾಲಿನ ಶಾಲಾ ಪ್ರಾರಂಭೋತ್ಸವ

Share with

ಬಂಟ್ವಾಳ : ಶಾಲೆ ಕೆಲಿಂಜದಲ್ಲಿ ಶಾಲಾ ಪ್ರಾರಂಭೋತ್ಸವ ಮೆರವಣಿಗೆ ಯೊಂದಿಗೆ ಪ್ರಾರಂಭವಾಯಿತು.ಮಕ್ಕಳಿಗೆ ಸಿಹಿತಿಂಡಿ , ಬಲೂನ್ ನೀಡಿ ಸ್ವಾಗತಿಸಲಾಯಿತು . ಬಳಿಕ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಂತಿ, ಹಳೆ ವಿದ್ಯಾರ್ಥಿಗಳಾದ ಸಂತೋಷ್ ಶೆಟ್ಟಿ ಸೀನಾಜೆ, ಚಿತ್ತರಂಜನ್ ನೆಕ್ಕಿಲಾರು, ಜಯಪ್ರಸಾದ್, ಸಂದೀಪ್ ಪೂಜಾರಿ,ಜನಾರ್ದನ ಗೌಡ ಕೆಲಿಂಜ, ಶ್ರೀಧರ್ ಗೌಡ ವಳಗುಡ್ಡೆ, ಹಮೀದ್ ಗುಳಿಗದ್ದೇ, ಅಬ್ದುಲ್ ಹಮೀದ್ ಪೆಲತ್ತಡ್ಕ, ಉಮೇಶ್ ಮಜ್ಜೋನಿ. ಡ್ರೈವರ್ ಹರೀಶ್ ಉಪಸ್ಥಿರಿದ್ದರು . ಮಕ್ಕಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಸ್ವಾಗತಿಸಿ .ಶಿಕ್ಷಕಿ ನಳಿನಾಕ್ಷಿ ವಂದಿಸಿದರು. ಶಿಕ್ಷಕಿ ಉಷಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ಅಶ್ವಿತ, ತ್ರಿವೇಣಿ, ಜಯಶ್ರೀ,ಕಾವ್ಯಶ್ರೀ ಸಹಕರಿಸಿದರು .ಮಕ್ಕಳಿಗೆ ಪಠ್ಯಪುಸ್ತಕಗಳನ್ನು, ನೋಟ್ ಪುಸ್ತಕ, ಸಮವಸ್ತ್ರಗಳನ್ನು ವಿತರಿಸಿ , ಸಿಹಿ ಬಿಸಿಯೂಟ ವಿತರಿಸಲಾಯಿತು.


Share with

Leave a Reply

Your email address will not be published. Required fields are marked *