ಕಳೆದ ಬಾರಿ ಹಾಗೆಯೇ ಈ ಬಾರಿಯೂ ಮೋದಿ ಹ್ಯಾಟ್ರಿಕ್ ಗೆಲುವಿನಲ್ಲಿ ಉತ್ತರ ಪ್ರದೇಶ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಕೊಂಡಿದ್ದ BJPಗೆ ಶಾಕ್ ಆಗಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಜಯಗಳಿಸಿದ್ದ BJP, ಸದ್ಯದ ಟ್ರೆಂಡ್ ಪ್ರಕಾರ ಕೇವಲ 32 ಕ್ಷೇತ್ರಗಳಲ್ಲಿ ಮುನ್ನಡೆ ಇದೆ. ಇನ್ನು INDIA ಮೈತ್ರಿ 45 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 5 ಸ್ಥಾನದಲ್ಲಿದ್ದ ಸಮಾಜವಾದಿ ಪಕ್ಷ ಸದ್ಯ 36 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ.