ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಗೆಲುವಿನ ನಾಗಲೋಟ ಮುಂದುವರಿಸಿದ್ದಾರೆ.
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ವಿನೋದ್ ಅಸೂಟಿ ಸೋಲು ಕಂಡಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ದಂಗಲ್ ವರ್ಕ್ ಆಗಿಲ್ಲ. ಬ್ರಾಹ್ಮಣ ಸಮುದಾಯದ ಜೋಶಿ ವಿರುದ್ಧ ಒಬಿಸಿ (ಕುರುಬ) ಸಮುದಾಯದ ವಿನೋದ್ ಅಸೂಟಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಪ್ರತಿಸಲವೂ ಲಿಂಗಾಯತ ಅಭ್ಯರ್ಥಿ ನೀಡುತ್ತಿದ್ದ ಟಿಕೆಟ್ ಈ ಬಾರಿ ಒಬಿಸಿಗೆ ಕಾಂಗ್ರೆಸ್ ನೀಡಿತ್ತು.