ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟವನ್ನು ಕರೆದಿದ್ದಾರೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ಇದರಿಂದಾಗಿ ಪ್ರಧಾನಿಯವರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ನಾಳೆಗಾಗಿ ದೇಶವೇ ಕಾಯುತ್ತಿದೆ. ಸಚಿವ ಸಂಪುಟ ಸಂಪೂರ್ಣವಾಗಿ ವಿಸರ್ಜಿಸಿ, ಮತ್ತೆ NDA ಒಕ್ಕೂಟದೊಂದಿಗೆ ಹೊಸ ಸಚಿವ ಸಂಪುಟ ರಚನೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಯಾವ ತಂತ್ರ ಹೂಡುತ್ತಾರೋ ಕಾದುನೋಡಬೇಕಿದೆ.