ದೆಹಲಿ : ಕೆಂದ್ರದಲ್ಲಿ ಸರ್ಕಾರ ರಚಿಸಲು ಸಿದ್ಧವಾಗುತ್ತಿರುವ ಬಿಜೆಪಿಗೆ ಆಂದ್ರದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ತನ್ನ ಬೇಡಿಕೆಯನ್ನು ಮುಂದಿಟ್ಟಿದೆ. ಕನಿಷ್ಟ ಐದು ಜನರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ನೀಡಬೇಕು ಎಂದು ಅದು ತನ್ನ ಬೇಡಿಕೆಯನ್ನು ಇಟ್ಟಿದೆ. ಇದೇ ವೇಳೆ ಏಕನಾಥ ಶಿಂಧೆ ಕೂಡಾ ಪ್ರಮುಖ ಖಾತೆಯ ಬೇಡಿಕೆ ಮುಂದಿಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕೇವಲ ಎರಡು ಸ್ಥಾನಗಳನ್ನು ಪಡೆದುಕೊಂಡಿರುವ ಆರ್‌ಎಲ್‌ಡಿ ಕೂಡಾ ಖಾತೆಯ ಬೇಡಿಕೆ ಮುಂದಿಟ್ಟಿದೆ. ಎನ್‌ಡಿಎ ಜೊತೆಗಿರುವ ಪಕ್ಷಗಳನ್ನು ತೃಪ್ತಿ ಪಡಿಸಿಕೊಂಡೇ ಬಿಜೆಪಿ ಈಗ ಸರ್ಕಾರ ರಚನೆಗೆ ಮುಂದಾಗಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಇನ್ನು ಜೆಡಿಯು ನಾಯಕ ನಿತೀಶ್ ಕುಮಾರ್ ಇನ್ನೂ ಕೂಡಾ ತನ್ನ ನಿಲುವು ವ್ಯಕ್ತಪಡಿಸದೇ ಇರುವುದು ಕೂಡಾ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.