ಬಾವಿಗೆ ಬಿದ್ದ ಹಸುವಿಗೆ ಜೀವದಾನ ನೀಡಿದ ಭಜರಂಗದಳ ಕಾರ್ಯಕರ್ತರು

Share with

ಉಡುಪಿ: ಪರ್ಕಳ ಸಮೀಪದ ಹೆರ್ಗದಲ್ಲಿ ಕಾಮಗಾರಿ ಹಂತದಲ್ಲಿದ್ದ ಬಾವಿಗೆ ಬಿದ್ದ ಹಸುವನ್ನು ಭಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿ ಜೀವದಾನ ನೀಡಿದ್ದಾರೆ. ಸುಮಾರು 40 ಅಡಿ ಆಳದ ಬಾವಿಗೆ ಈ ಹಸು ಬಿದ್ದಿತ್ತು. ತಕ್ಷಣ ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪ್ರಾಣೇಶ್ ಪರ್ಕಳ ನೇತೃತ್ವದ ಕಾರ್ಯಕರ್ತರ ತಂಡ ಕಾರ್ಯಾಚರಣೆ ನಡೆಸಿ ಗಾಯಾಳು ಹಸುವನ್ನು ರಕ್ಷಿಸಿತು. ಪರ್ಕಳ ಬಜರಂಗದಳದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಾಣೇಶ್ ಪರ್ಕಳ, ಶಶಿಕಾಂತ್ ನಡಿದಾರೆ, ಋತ್ವಿಕ್ ಆಚಾರ್ಯ, ಪ್ರವೀಣ್ ಪರ್ಕಳ, ಶರತ್ ದೊಡ್ಡಣಗುಡ್ಡೆ ಹಾಗೂ ಸ್ಥಳೀಯರು ಸಹಕರಿಸಿದರು.


Share with

Leave a Reply

Your email address will not be published. Required fields are marked *