ಕಾಸರಗೋಡು: ಆಲ್ ಕೇರಳ ಫೋಟೋಗ್ರಾರ‍್ಸ್ ಅಸೋಸಿಯೇಷನ್ ವೆಸ್ಟ್ ಯೂನಿಟ್ ಕಾಸರಗೋಡು ಇದರ ವತಿಯಿಂದ ೩.೬.೨೦೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಶಾಲಾ ಪ್ರವೇಶೋತ್ಸವದ ಪ್ರಯುಕ್ತ ಕಾಸರಗೋಡು ಬೀರಂತಬೈಲು ಗವರ್ಮೆಂಟ್ ವೆಲ್ಫೇರ್ ಎಲ್.ಪಿ. ಶಾಲಾ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡಿ ಸಿಹಿತಿಂಡಿ ಹಂಚಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪದ್ಯಾಯಿನಿ ವಿಜಯ ಕುಮಾರಿ ಬಿ. ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ೩೩ ನೇ ವಾರ್ಡ್ ಕೌನ್ಸಿಲರ್ ವೀಣಾ ಅರುಣ್ ಮಕ್ಕಳಿಗೆ ಪುಸ್ತಕವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷರಾದ ಮೈಂದಪ್ಪ ಕೆ.ಎಂ, ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಸು.ಎ, ವಲಯ ಜತೆ ಕಾರ್ಯದರ್ಶಿ ಮನೋಜ್ ಕುಮಾರ್ ಎಟಿ, ವಲಯ ಪಿ.ಆರ್.ಒ ಚಂದ್ರಶೇಖರ.ಎಂ,ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್ ರಾಮು ವಿಡಿಯೋ,ಯೂನಿಟ್ ಉಪಾಧ್ಯಕ್ಷ ಹಾಗೂ ಸಾಂತ್ವನ ಕೋರ್ಡಿನೇಟರ್ ಗಣೇಶ್ ರೈ, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಜತೆ ಕಾರ್ಯದರ್ಶಿ ವಿಶಾಖ್, ಯೂನಿಟ್ ನಿರೀಕ್ಷಕ ಪ್ರಮೊದ್ ಐಫೋಕಸ್, ಯೂನಿಟ್ ಸದಸ್ಯ ಅಭಿಷೇಕ್.ಸಿ ಹಾಗೂ ಅದ್ಯಾಪಿಕೆ ಸ್ನೇಹ ಟೀಚರ್, ಸಹಾಯಕಿ ದೇವಕಿ ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ಅದ್ಯಾಪಿಕೆ ಸುಚಿತ್ರಾ ಎ. ಧನ್ಯವಾದ ನೀಡಿದರು.