ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್ ( ರಿ ) ಬಂಟ್ವಾಳ ಪೊಳಲಿ ವಲಯ , ಅರಣ್ಯ ಇಲಾಖೆ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಬ್ಬೆಟ್ಟು ಇಲ್ಲಿ ಪರಿಸರ ಮಾಹಿತಿ ಮತ್ತು ಗಿಡ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ತುಂಬೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯಾದ ಶ್ರೀ ಕೃಷ್ಣ ರವರು, ಅರಣ್ಯ ಪಾಲಕರಾದ ಶ್ರೀ ಜಿತೇಶ್, ಪೊಳಲಿ ವಲಯ ಅಧ್ಯಕ್ಷರಾದ ಶ್ರೀ ಜನಾರ್ಧನ ಆಚಾರ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಚಂಚಲಾಕ್ಷಿ ಶಾಲಾ ಮುಖೋಪಾಧ್ಯಾಯರಾದ ಶ್ರೀಮತಿ ಲೀನಾ, ಒಕ್ಕೂಟ ಅಧ್ಯಕ್ಷರಾದ ಶ್ರೀ ಉಮೇಶ್ ಆಳ್ವ, ಕೃಷಿ ಮೇಲ್ವಿಚಾರಕರಾದ ಶ್ರೀ ಜಯರಾಮ್, ವಲಯ ಮೇಲ್ವಿಚಾರಕರಾದ ಶ್ರೀಮತಿ ಹರಿಣಾಕ್ಷಿ ಸೇವಾ ಪ್ರತಿನಿಧಿ ಶ್ರೀಮತಿ ಶೈಲಜ ಮತ್ತು ಶ್ರೀಮತಿ ಶೋಭ ಉಪಸ್ಥಿತರಿದ್ದರು