ಸುಜೀರ್ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

Share with

ಧರ್ಮಸ್ಥಳ :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ .ಟ್ರಸ್ಟ್ ( ರಿ ) ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸುಜೀರ್  ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.                ಮಕ್ಕಳಿಗೆ ಗಿಡ ವಿತರಣೆ ಮಾಡುವುದರ ಮೂಲಕ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ  ಉಮಾರ್ ಫಾರೂಕ್ ರವರು ಕಾರ್ಯಕ್ರಮವನ್ನುಉದ್ಘಾಟಿಸಿ ಪರಿಸರ ಸಂರಕ್ಷಣೆ ,ನಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ , ಹಾಗೂ ಮಕ್ಕಳಲ್ಲಿ ಈ ದಿನದ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.                         ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ  ಮಮತ ರವರು ಯೋಜನೆ ಎಲ್ಲಾ ವಿಶೇಷ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಕಾರ್ಯಕ್ರಮದ ಪ್ರಾಸ್ತವಿಕ ಮಾತನಾಡಿದರು .             ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ  ರಶೀದ  ವಹಿಸಿದ್ದರು .                      ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪರಂಗಿಪೇಟೆ ಶ್ರೀ ರಾಮ ಶಾಲೆಯ  ವ್ಯವಸ್ಥಾಪಕರಾದ ಆರ್ ಕೆ ದೇವದಾಸ್  ಪರಿಸರ ಆಗುವ ಜಲಮಾಲಿನ್ಯ, ವಾಯುಮಾಲಿನ್ಯ, ನಮ್ಮ ಸುತ್ತಮುತ್ತ ಸ್ವಚ್ಛತೆಯನ್ನ ಇಟ್ಟುಕೊಳ್ಳುವ ರೀತಿ . ಪ್ಲಾಸ್ಟಿಕ್ ನ ಬಳಕೆ ಮಾಡದಿರುವುದು ,ತ್ಯಾಜ್ಯ ವಸ್ತುಗಳ ವಿಲೇವಾರಿ ,ಓಜೋನ್ ಪದರದ ಪ್ರಾಮುಖ್ಯತೆ ಈ ಬಗ್ಗೆ ಬಹಳ ಮಾಹಿತಿ ನೀಡಿದರು.                  ಈ ಸಂದರ್ಭ ವೇದಿಕೆಯಲ್ಲಿ ಪುದು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ರಮ್ಲಾನ್, ಪುದು ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ  ಇಕ್ಬಾಲ್ ಸುಜೀರ್, ವಲಯ ಒಕ್ಕೂಟಗಳ  ಅಧ್ಯಕ್ಷರಾದ ಲೀಡಿಯಾ ಪಿಂಟೊ ಉಪಸ್ಥಿತರಿದರು,                                ಈ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಎಲೆ ಗುರುತಿಸುವಿಕೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ಬಹುಮಾನವನ್ನು  ವಿತರಿಸಲಾಯಿತು  ಕಾರ್ಯಕ್ರಮದಲ್ಲಿ ಸುಜೀರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಮಲ್ಲಿಕಾ, ವಿ,ಎಲ್,ಇ ದಿವ್ಯ , ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ  ಶಾಲಾ ವಠಾರದಲ್ಲಿ ಗಿಡಗಳ ನಾಟಿ ಮಾಡಲಾಯಿತು.          ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನಿ  ಗೀತಾ  ಸ್ವಾಗತಿಸಿ,  ಶಿಕ್ಷಕಿ  ಹಿಲ್ಡಾ  ಫಿರೇರಾ ವಂದಿಸಿದರು , ಶಿಕ್ಷಕಿ  ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *