ಕಾಸರಗೋಡು : ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟ್ರಮಣ ಬಾಲಗೋಕುಲದ “ಕುಟುಂಬ ಸಂಗಮ” ಕಾರ್ಯಕ್ರಮವು 3.6.2024 ರಂದು ಜರಗಿತು. ಬಾಲಗೋಕುಲ ಪ್ರಮುಖ್ ಶ್ರೀ ದೇವದಾಸ್ ನುಳ್ಳಿಪ್ಪಾಡಿ ಇವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಬಾಲಗೋಕುಲದ ಮಕ್ಕಳು ತಮ್ಮ ತಾಯಂದಿರಿಗೆ “ಮಾತೃ ಪೂಜನಾ” ವಿಶೇಷ ಕಾರ್ಯಕ್ರಮವನ್ನು ಶ್ರೀ ದೇವದಾಸ್ ನುಳ್ಳಿಪ್ಪಾಡಿ ಇವರ ನೇತೃತ್ವದಲ್ಲಿ ನಡೆಯಿತು. ಮಕ್ಕಳಿಗೆ ಮತ್ತು ಹಿರಿಯರಿಗೆ “ರಾಮಾಯಣ ಮತ್ತು ಮಹಾಭಾರತದ” ಕ್ವಿಜ್ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ 3 ಗಂಟೆಗೆ ರಮ್ಯಾ, ಆಶಿಕಾ, ಅಥಿತಿ ಇವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಯಕ್ಷಗಾನ ಅರ್ಥಧಾರಿ ನಿವೃತ್ತ ಮುಖ್ಯೋಪಧ್ಯಾಯ ನಾಯ್ಕಾಪು ಶ್ರೀ ಗುರುಮೂರ್ತಿ ಹಾಗೂ ಸಂಗೀತ ವಿದ್ವಾನ್ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಭಾಗವಹಿಸಿದರು. ಬಾಲಗೋಕುಲದ ಅಧ್ಯಾಪಿಕೆಯೂ 32ನೇ ವಾರ್ಡ್ ಕೌನ್ಸಿಲರ್ ಶ್ರೀಮತಿ ಶ್ರೀಲತಾ ಟೀಚರ್ ಉಪಸ್ಥಿತರಿದ್ದರು. ಬಾಲಗೋಕುಲದ ಮಕ್ಕಳಿಗೆ ಎಲ್.ಕೆ.ಜಿ ಯಿಂದ ಕಾಲೇಜ್ ಕಲಿಯುವ ವಿದ್ಯಾರ್ಥಿಗಳಿಗೆ ”ಪುಸ್ತಕ ವಿತರಣೆ” ಮತ್ತು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಎಸ್ .ಎಸ್. ಎಲ್.ಸಿ ಮತ್ತು +2 ನಲ್ಲಿ ಅಧಿಕ ಅಂಕ ಗಳಿಸಿದ ಶ್ರೀ ವೆಂಕಟ್ರಮಣ ಬಾಲಗೋಕುಲದ ಹಳೆ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಯಿತು,ವಿವಿಧ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀ ರಾಮಕೃಷ್ಣ ಹೊಳ್ಳ ಇವರು ಸ್ವಾಗತಿಸಿ ಶ್ರೀ ಕಿಶೋರ್ ಕುಮಾರ್ ಧನ್ಯವಾದ ನೀಡಿದರು ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.*