ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ.ಬಿ ಸಿ ಟ್ರಸ್ಟ್ (ರೀ ).ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ವಲಯದ ಮಂಡಾಡಿ ಒಕ್ಕೂಟದ ತ್ರೈ ಮಾ ಸಿಕ ಸಭೆ ಯು ಬಂಟ್ವಾಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಯೋಜನೆಯಿಂದ ಸಂಘದ ಸದಸ್ಯರಿಗೆ ಸಿಗುವ ಅನುದಾನ,ನಿರ್ಗತಿಕರ ಮಾಶಾಸನ,ಸುಜ್ಞಾನನಿಧಿ ಶಿಷ್ಯ ವೇತನ,ಪ್ರಗತಿ ರಕ್ಷಾ ಕವಚದ ಪ್ರಯೋಜನ,ಸಂಪೂರ್ಣ ಸುರಕ್ಷಾ ಆರೋಗ್ಯ್ ಕಾರ್ಡ್ ಅಗತ್ಯತೆ,ಜನ ಮಂಗಲ ಕಾರ್ಯಕ್ರಮದಲ್ಲಿ ನೀಡುವ ಸಲಕರಣೆಗಳು,ಸ್ವ ಉದ್ಯೋಗಕ್ಕೆ ಸಿಡ್ಬಿ ಸಾಲ ಯೋಜನೆ,ಸಂಘದ ಸದಸ್ಯರಿಗೆ ಯಾವುದೇ ಉದ್ದೇಶಕ್ಕೆ ಸಾಲ ನೀಡಲಾಗುವುದು ಹಾಗೂ ಅದಕ್ಕೆ ವಿಧಿಸುವ ಬಡ್ಡಿ ದರದ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ತಾಲೂಕಿನ ಕೃಷಿ ಅಧಿಕಾರಿ ಜಯರಾಮ್ ರವರು ಕೃಷಿ ಯಂತ್ರೋಪಕರಣಗಳು ಕಡಿಮೆ ಬಾಡಿಗೆಯಲ್ಲಿ ಯೋಜನೆಯಿಂದ ಸಿಗುತಿದ್ದು ಕೃಷಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು . ಬಿ ಸಿ ರೋಡ್ ವಲಯ ಮೇಲ್ವಿಚಾರಕಿ ವೇದಾವತಿ, ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ, ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಆಶಾಲತಾ ಯೋಜನೆಯಿಂದ ಮಂಡಾಡಿ ಒಕ್ಕೂಟದ ಸದಸ್ಯರಿಗೆ ಸಿಕ್ಕಿರುವ ಸವಲತ್ತು ಗಳ ಬಗ್ಗೆ ವರದಿಯನ್ನು ಮಂಡಿಸಿದರು. ಸೂರ್ಯೋದಯ ವಾತ್ಸಲ್ಯ ಸಂಘದ ಸದಸ್ಯ ಅಬೂಬಕ್ಕರ್ ರವರಿಗೆ ಆರೋಗ್ಯ ಸಮಸ್ಯೆಗೆ ಮಂಜೂರಾದ 20000/ ಅನುದಾನದ ಚಕ್ ನ್ನು ಈ ಸಂದರ್ಭ ಈ ಸಂದರ್ಭದಲ್ಲಿ ನೀಡಲಾಯಿತು . ಸಂಘದ ಸಭೆಯ ಜವಾಬ್ದಾರಿಯನ್ನು ಧರ್ಮಶ್ರೀ ಮತ್ತು ಸ್ಫೂರ್ತಿ ಸಂಘದವರು ನಿರ್ವಹಿಸಿದರು.ಒಕ್ಕೂಟದ ಎಲ್ಲಾ ಪದಾಧಿಕಾರಿಗಳು,ಎಲ್ಲಾ ದಾಖಲಾತಿ ಸಮಿತಿ ಸದಸ್ಯರು ಸಂಘದ ಸದಸ್ಯರು ಹಾಜರಿದ್ದರು.