ಮಂಜೇಶ್ವರ: ಬಡಾಜೆ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಯಾದವ ಬಡಾಜೆ ಅಕ್ಷರ ದೀಪ ಬೆಳಗಿಸಿ ನೆರವೇರಿಸಿದರು. ನೂತನವಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಬೆಲೂನ್ ಹಾಗೂ ಕಿರೀಟ ತೊಡಿಸಿ ಅಕ್ಷರ ದೀಪ ಬೆಳಗಿಸುವುದರೊಂದಿಗೆ ಸ್ವಾಗತಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಮೂಸ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವ್ರತ್ತ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಐಲ, ಯಂಗ್ ಮೆನ್ಸ್ ಅಸೋಸಿಯೇಷನ್ ಮಚ್ಚ೦ಪಾಡಿ ಇದರ ಅಧ್ಯಕ್ಷರಾದ ಮೋಹಿದೀನ್ ಕುನ್ಚಿ ,ಮಾತೃ ಮಂಡಳಿ ಅಧ್ಯಕ್ಷರಾದ ನೆಶಿದಾ , ಖಲೀಲ್,ಕೆಬೀರ್, ರಹ್ಮಾನ್ ,ಉಪಾಧ್ಯಕ್ಷರಾದ ಶಶಿಕಲಾ,ದಯಾವತಿ, ಗೀತಾ ಮೊದಲಾದವರು ಉಪಸ್ಥಿತರಿದ್ದರು. ಯಂಗ್ ಮೆನ್ಸ್ ಅಸೋಸಿಯೇಷನ್ ಮಚ್ಚ೦ಪಾಡಿ ವತಿಯಿಂದ ನೀಡಲಾದ ನೋಟ್ಸ್ ಪುಸ್ತಕ ಹಾಗೂ ಕಲಿಕಾ ಕಿಟ್ ಗಳನ್ನು ಶಾಲೆಯ ಎಲ್ಲಾ.ಮಕ್ಕಳಿಗೂ ವಿತರಿಸಲಾಯಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿವಪ್ರಸಾದ್ ರಾವ್ ವಂದಿಸಿದರು. ತದನಂತರ ಅಶೋಕ್ ಕೊಡ್ಲಮೊಗರು ರವರು ರಕ್ಷಕರಿಗೆ “ರಕ್ಷಕ ಜಾಗ್ರತಿ ” ತರಗತಿ ನಡೆಸಿದರು.