ಉಪ್ಪಳ ಪೇಟೆಯಲ್ಲಿ ಮುಗಿಯದ ಟ್ರಾಫಿಕ್ ಜಾಮ್: ಬಸ್ ಪ್ರಯಾಣಿಕರ ಸಹಿತ ಜನರ ಸಂಚಾರಕ್ಕೆ ಸಮಸ್ಯೆ ಸೃಷ್ಟಿ

Share with

ಉಪ್ಪಳ: ಉಪ್ಪಳ ಪೇಟೇಯಲ್ಲಿ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಪ್ಲೈ ಓವರ್ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿವಂತೆ ಟ್ರಾಫಿಕ್ ಜಾಮ್ ಉಂಟಗುತ್ತಿರುವುದು ನಿತ್ಯ ಘಟನೆಯಾಗಿರುವುದಾಗಿ ದೂರಲಾಗಿದೆ. ಮಧ್ಯಾಹ್ನ ಹಾಗೂ ಸಂಜೆ ಹೊತ್ತಲ್ಲಿ ಭಾರೀ ವಾಹನಗಳ ದಟ್ಟಣೆಯಿಂದ ಬಸ್ ಪ್ರಯಾಣಿಕರ ಸಹಿತ ಇತರ ವಾಹನಗಳಲ್ಲಿ ಸಂಚರಿಸುತ್ತಿರುವ ಜನರು ವಿವಿಧ ಕಡೇಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾದ್ಯವಾಗದೆ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕೈಕಂಬದಿಂದ -ಉಪ್ಪಳ ತನಕ ಭಾರೀ ವಾಹನಗಳ ದಟ್ಟಣೆ ಉಂಟಾಗಿದ್ದು, ಉಪ್ಪಳ ಪೇಟೆಗೆ ೫ ನಿಮಿಷದಲ್ಲಿ ತಲುಪ ಬೇಕಾಗಿದ್ದು, ವಾಹನಗಳ ದಟ್ಟಣೆಯಿಂದ ಸುಮಾರು ೨೫ ನಿಮಿಷಗಳು ಬೇಕಾದ ಅವಸ್ಥೆ ಉಂಟಾಗಿದೆ. ಪ್ರಧಾನವಾಗಿ ಇಲ್ಲಿ ಸರ್ವೀಸ್ ರಸ್ತೆ ಕೆಲಸ ಪೂರ್ತಿಗೊಳ್ಳದೆ ಇರುವುದು, ಹಾಗೂ ವಾಹನಗಳಿಗೆ ನಿಲುಗಡೆಗೊಳಿಸಲು ಸ್ಥಳವಕಾಶ ಇಲ್ಲದೆ ರಸ್ತೆ ಬದಿಯಲ್ಲಿಯೇ ನಿಲ್ಲಿಸುವುದು, ಮತ್ತು ಒಳರಸ್ತೆಯಿಂದ ವಾಹನಗಳು ಅಡ್ಡ ದಾಟುವ ವೇಳೆ ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿರುವುದೇ ಸಂಚಾರ ಸಮಸ್ಯೆಗೆ ಕಾರಣವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ವಾಹನಗಳ ದಟ್ಟಣೆಯಿಂದ ಬಸ್‌ಗಳು ನಿಗದಿತ ಸಮಯಕ್ಕೆ ತಲುಪಲು ಸಾದ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ತಲಪಾಡಿ ತನಕ ತೆರಳದೆ ಅರ್ಧದಿಂದಲೇ ಮರಳಬೇಕಾದ ಪರಿಸ್ಥಿತಿ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸಂಬಂಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲೇ ಕಾಮಗಾರಿ ಮುಗಿಸಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *