ವಿಠಲ್ ಜೇಸೀಸ್ ಶಾಲೆಯಲ್ಲಿ ಫ್ರೆಷರ್ಸ್ ಡೇ ಆಚರಣೆ

Share with

ವಿಟ್ಲ: ವಿಟ್ಲ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಗೌರವಿಸಿ ಪರಿಚಯಿಸುವ ನೂತನ ಕಾರ್ಯಕ್ರಮ ‘ಫ್ರೆಷರ್ಸ್ ಡೇ’ ಆಚರಿಸಲಾಯಿತು.
ಹೊಸ ವಿದ್ಯಾರ್ಥಿಗಳಿಗೆ ತನ್ನ ಬಾಲ್ಯದ ನೆನಪುಗಳು ಉಳಿಯುವಂತೆ ವಿದ್ಯಾರ್ಥಿಯ ಓದಿನ ಮಟ್ಟಕ್ಕೆ ಅವಶ್ಯಕ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಾಯಾರಿನ ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಆದಿನಾರಾಯಣ ಭಟ್ ಮಾತನಾಡಿ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಹವ್ಯಾಸಗಳಿಗೆ ಅವಕಾಶ ಕೊಡುವುದರಿಂದ ಪುಟ್ಟ ಮಕ್ಕಳ ವಿಷಯೇತರ ಚಟುವಟಿಕೆಗಳಲ್ಲಿ ಬೆಳವಣಿಗೆ ಸಾಧ್ಯ, ಇದು ಮಕ್ಕಳಿಗೆ ತುಂಬಾ ಸಂತಸ ನೀಡುತ್ತದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಎಲ್. ಎನ್.ಕೂಡೂರು ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳು ಹೊಸದಾಗಿ ಒಳಾoಗಣ ಶಟಲ್ ಹಾಗೂ ವಾಲಿಬಾಲ್ ಕೋರ್ಟ್ ಗಳ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸ್ಟೆಮ್ ರೋಬೋಟಿಕ್ ಮ್ಯಾನೇಜರ್ ಸರ್ವೇಶ್ ನಾಯಕ್ ರೋಬೋಟಿಕ್ ಮಹತ್ವವನ್ನು ವಿವರಿಸಿದರು. ಸಮಾರಂಭದಲ್ಲಿ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಪ್ರಕಾಶ್, ಶಾಲೆಯ ಆಡಳಿತಾಧಿಕಾರಿ ಎ.ರಾಧಾಕೃಷ್ಣ, ಪ್ರಿನ್ಸಿಪಾಲ್ ಜಯರಾಮ ರೈ, ವೈಸ್ ಪ್ರಿನ್ಸಿಪಾಲ್ ಜ್ಯೋತಿ ಶೆಣೈ, ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಹೆತ್ತವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಹೊಸದಾಗಿ ಸೇರಿದ 166 ಹೊಸ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ನಡೆಸಿಕೊಟ್ಟರು.

ವಿದ್ಯಾರ್ಥಿನಿಯರಾದ ಅನ್ವಿತಾ ಹಾಗೂ ತಂಡದವರು ಪ್ರಾರ್ಥನೆ ಗೈದರು.ಅತ್ಮಿ ಸ್ವಾಗತಿಸಿದರು. ಆಯಿಷಾತ್ ಅಮಿಷ ವಂದಿಸಿದರು, ಅನುಪಮಾ ಹಾಗೂ ಅಭಿರಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *