ಹೊಸಂಗಡಿ : ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ,ದರೋಡೆ, ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆಯ ನಿಷ್ಕ್ರಿಯ ಧೋರಣೆ ಖಂಡನೀಯ ಎಂದು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಆರೋಪಿಸಿದೆ.
ಕಳೆದ ಸುಮಾರು 2ತಿಂಗಳಿಂದ ಮನೆ ಕಳ್ಳತನ, ವ್ಯಾಪಾರ ಕೇಂದ್ರ, ಅಂಗಡಿ ಗಳು, ನಿರಂತರ ಕಳ್ಳತನ ವಾಗುತ್ತಿದೆ, ಒಬ್ಬರೇ ಒಬ್ಬರು ಕಳ್ಳರನ್ನು ಬಂದಿಸದ ಇಲಾಖೆಯ ದೌರ್ಬಲ್ಯ ಯಾರ ಸಂರಕ್ಷಣೆ ಗೆ ಎಂದು ಬಿಜೆಪಿ ಪ್ರಶ್ನೆಸಿದೆ?
ಗಡಿ ಭಾಗ ವಾಗಿರುವುದರಿಂದ ಮದ್ಯ, ಅಮಲು ಪದಾರ್ಥ ಗಳ ಮಾರಾಟ ವ್ಯಾಪಕ ವಾಗಿದೆ,
ಜುಗರಿ ಕೇಂದ್ರ ವಾಗಿ ಬಹಿರಂಗ ಆಟಗಳು ಪೊಲೀಸ್ ಇಲಾಖೆಯ ಕಣ್ಣಿಗೆ ಕಾಣುತಿಲ್ಲ,
ರಾತ್ರಿ ಗಸ್ತು ಇಲ್ಲ, ಪ್ರಶ್ನೆಸಿದರೆ ಪೊಲೀಸ್ ರ ನೇಮಕಾತಿ ಇಲ್ಲ ಡ್ಯೂಟಿ ಮಡಲು ಪೊಲೀಸ್ ರ ಕೊರತೆ ಎಂದು ಹೇಳುತ್ತಾರೆ.ಇದನೆಲ್ಲ ಪರಿಹರಿಸಲು ಮಂಜೇಶ್ವರ ಶಾಸಕರು ಧ್ವನಿ ಎತ್ತಿ ಸರಕಾರದ ಗಮನಕ್ಕೆ ತರುವುದಿಲ್ಲ.
ಎಂದು ಬಿಜೆಪಿ ಆರೋಪಿಸಿದೆ
.
ಜನತೆಗೆ ಧೈರ್ಯ, ಸಂರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆ ಜನರಲ್ಲಿ ಭೀತಿ ಉಂಟುಮಾಡುತಿದೆ.
ಕೂಡಲೇ ಕಳ್ಳತನ ಹಾಗೂ ನಕಲಿ ಮದ್ಯ ಮಾರಾಟ ಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಗ್ರಹಿಸಿದೆ.
ಮಂಜೇಶ್ವರ ವಿಭೂದೆಂದ್ರ ಮಂಟಪ ದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಸಭೆ ಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಯಾದವ ಬಡಾಜೆ ಅಧ್ಯಕ್ಷತೆ ವಹಿಸಿದ್ದರು,
ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡ ರಾದ ಹರೀಶ್ ಚಂದ್ರ ಮಂಜೇಶ್ವರ, ಲಕ್ಷ್ಮಣ ಬಿ ಎಂ, ವಿನಯ ಭಾಸ್ಕರ, ಸುಪ್ರಿಯಾ ಶನೈ, ಅವಿನಾಶ್ ಕೀರ್ತಿಶ್ವರ, ಮೌನೇಶ್ ಆಚಾರ್ಯ ಕಡಂಬಾರ್, ಕಾಳಿಕಾಂಬಾ ಗುರು ಕಿರಣ್, ನವೀನ್ ಮಜಲು, ದೇವದಾಸ್ ತುಮಿನಾಡ್, ಮೊದಲದವರು ಉಪಸ್ಥಿತರಿದ್ದರು.
ಮಂಜೇಶ್ವರ ಪೊಲೀಸ್ ಇಲಾಖೆ ವ್ಯಾಪ್ತಿಯ ಜಾಸ್ತಿ ಆಗಿದ್ದು ಸುಮಾರು 40ಪೊಲೀಸ್ ರು ಮತ್ತು ಅಧಿಕಾರಿಗಳು ಇರಬೇಕಾದಲ್ಲಿ ಅರ್ಧ ದಷ್ಟು ನೇಮಕಾತಿ ಆಗಿಲ್ಲ, ಪೊಲೀಸ್ ರ ಕೊರತೆ ನಿಗಿಸಬೇಕು ಮತ್ತು ವ್ಯಾಪ್ತಿ ಕಡಿಮೆ ಮಡಲು ಪೈವಳಿಕೆ, ಅಥವಾ ಬಾಯರ್ ಕೇಂದ್ರೀಕರಿಸಿ ಹೊಸ ಪೊಲೀಸ್ ಠಾಣೆ ತೆರೆಯಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಗ್ರಹಿಸಿದರೆ