ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಗತಿ ಬಂಧು ಸ್ವ-ಸಹಾಯ ಸಂಘದ ಕುಬಣೂರು [ಎಂ] ಒಕ್ಕೂಟದ ತ್ರೈ ಮಾಸಿಕ ಸಭೆ ಕುಬಣೂರು ಶ್ರೀ ರಾಮ ಎ.ಯು.ಪಿ ಶಾಲೆಯಲ್ಲಿ ನಡೆಯಿತು. ಒಕ್ಕೂಟದ ಮೇಲ್ವಿಚಾರಕರಾದ ಸಹದೇವ ರವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಶಾಂತಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ರೇವತಿ, ಸೇವಾ ಪ್ರತಿನಿಧಿ ವಸಂತಿ, ಸುವಿದ ಕಲೆಕ್ಷನ್ ಸಿಬ್ಬಂಧಿ ಹರ್ಷಿತ, ದಾಖಲಾತಿ ಸಮಿತಿಯ ಸಿಬ್ಬಂದಿಗಳಾದ ಗಾಯತ್ರಿ, ಯಶೋದ, ವಿದ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಜವಾಬ್ದಾರಿ ತಂಡವಾದ ವಿಘ್ನೇಶ್ವರ ಸಂಘದ ವರದಿಯನ್ನು ಸದಸ್ಯೆ ಸವಿತ ರಾಘವೇಂದ್ರ ವಾಚಿಸಿದರು. ಸರೋಜಿನಿ ನಿರೂಪಿಸಿದರು. ವಿಜಯಲಕ್ಷಿ÷್ಮ ರೈ ಧನ್ಯವಾದ ನೀಡಿದರು. ಕಾರ್ತಿಕೇಯ ಸಂಘದ ವರದಿಯನ್ನು ಪ್ರೇಮಲತ ಟೀಚರ್ ವಾಚಿಸಿ, ಲಲಿತ ಪ್ರಕಾಶ್ ಸ್ವಾಗತಿಸಿದರು.