ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್‌ಫೇರ್ ಕೋ-ಒಪರೇಟೀವ್ ಸೊಸೈಟಿ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಕೆದುಂಬಾಡಿ ಮಡ್ವ ಕಾಂಪ್ಲೆಕ್ಸ್ನಲ್ಲಿ ಶನಿವಾರ ನಡೆಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಕೇರಳ ತುಳು ಅಕಾಡೆಮಿ ಚಯರ್‌ಮೆನ್ ಕೆ.ಆರ್ ಜಯಾನಂದ ಕೌಂಟರ್‌ನ್ನು ಉದ್ಘಾಟಿಸಿದರು. ಕಾಸರಗೋಡು ಕೋ-ಓಪರೇಟಿವ್ ಸೊಸೈಟಿಯ ಜೊಯಿಂಟ್ ರಿಜಿಸ್ಟಾçರ್ ಲಸಿತ ಕೆ ಭದ್ರತಾ ಕೊಠಡಿಯನ್ನು ಉದ್ಘಾಟಿ¸ಸಿದರು. ಕಾಸರಗೋಡು ಕೋ-ಓಪರೇಟಿವ್ ಆಡಿಟ್ ಜೊಯಿನ್ ಡೈರೆಕ್ಟರ್ ಜಯಚಂದ್ರನ್ ಠೇವಣೆ ಸ್ವೀಕರಿಸಿದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಸತೀಶ್, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿವಿಧ ವಲಯದ ಗಣ್ಯರಾದ ಕಮಲಾಕ್ಷಿ, ಅಬೂಬಕ್ಕರ್ ಸಿದ್ದಿಕ್ ಪಾಡಿ, ನಾಗೇಶ್.ಕೆ, ಲತಾ.ಟಿ.ಎಂ, ಗೀತಾ.ವಿ ಸಾಮಾನಿ, ಶಿವರಾಜ್ ಕುಮಾರ್, ಅಬ್ದುಲ್ ಲತೀಫ್ ಕಲ್ಮಂಜ, ಮಾಲತಿ.ಕೆ, ಸುನಿಲ್ ಕುಮಾರ್.ವಿ, ರಾಮಚಂದ್ರ.ಎಸ್, ಮೋಹನ.ಬಿ, ಶಾಂತಾರಾಮ ಶೆಟ್ಟಿ, ಮೊಹಮ್ಮದ್ ಹನೀಫ್, ರಘುನಾಥ ಶೆಟ್ಟಿ, ಡಿ.ಬೂಬ, ಪ್ರಭಾಕರ ಶೆಟ್ಟಿ, ಕೃಷ್ಣಮೂರ್ತಿ.ಎನ್, ಚಂದ್ರಹಾಸ ಮಾಸ್ತರ್, ಶರೀಫ್.ಕೆ ಐ, ಜಯಪ್ರಕಾಶ್, ಸತೀಶ್.ಎ ಮೊದಲಾದವರು ಉಪಸ್ಥಿತರಿದ್ದರು. ಬ್ಯಾಂಕ್ ಅಧ್ಯಕ್ಷವಿಶ್ವನಾಥ ಕುದುರು ಗಣ್ಯರನ್ನು ಸ್ವಾಗತಿಸಿ, ಬೇಂಕ್ ಕಾರ್ಯದರ್ಶಿ ರವೀಂದ್ರ ಮಡ್ವ ವಂದಿಸಿದರು