ಬಂಟ್ವಾಳ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಶಂಭೂರು ಇಲ್ಲಿ ನಡೆಯಿತು. ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ,ಪಕ್ಷಿಗಳ ಪಾಲಿಗೆ ನಾವೆಲ್ಲರೂ ಆಪತ್ಬಂಧವರಾಗೋಣ ಎಂದು ಪ್ರಾತ್ಯಕ್ಷಿಕೆ ನಡೆಸಿ ನೀರು,ಆಹಾರ ಇಡುವ ಕ್ರಮವನ್ನು ವಿವರಿಸಿದರು. ಮುಖ್ಯ ಶಿಕ್ಷಕರಾದ ಜಯರಾಮ ಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು . ಶಾಲಾ ಶಿಕ್ಷಕರು ಸಹಕರಿಸಿದರು