ಉಪ್ಪಳ: ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ನ ಕಾಸರಗೋಡು ಜಿಲ್ಲಾ ಮಟ್ಟದ ವಾಚನ ಪಕ್ಷಾಚರಣೆ, ಮತ್ತು ಗ್ರಂಥಶಾಲಾ ಪ್ರಸ್ಥಾನದ ಸ್ಥಾಪಕರಾದ ಪಿ. ಎನ್.ಪಣಿಕ್ಕರ್ ರವರ ಚರಮ ದಿನಾಚರಣೆ ಯನ್ನು ದಿನಾಂಕ ೧೯ ರಂದು ಸರಕಾರಿ ಸೀನಿಯರ್ ಬೇಸಿಕ್ ಶಾಲೆ, ಕುಂಬಳೆ ಯಲ್ಲಿ ಆಚರಿಸಲಾಯಿತು. ಸಮಾರಂಭ ದ ಅಧ್ಯಕ್ಷ ತೆಯನ್ನು ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ವಹಿಸಿದ್ದು, ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಪಿ.ವಿ. ಕೆ. ಪನಯಾಲ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಪ್ರಶಸ್ತ ಕನ್ನಡ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ರವರು ಗ್ರಂಥಾಲಯ ಪಿತಾಮಹ ಶ್ರೀ ಪಿ. ಎನ್. ಪಣಿಕ್ಕರ್ ರ ಸಂಸ್ಮರಣಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಕುಂಬಳೆ ಜಿ. ಯಸ್. ಬಿ. ಶಾಲಾ ಮುಖ್ಯೋಪಾಧ್ಯಾಯ ವಿಜಯಕುಮಾರ್ ಪಾವಳ, ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಪಿ.ಕೆ.ಅಹಮ್ಮದ್ ಹುಸೈನ್, ಮಂಜೇಶ್ವರ ತಾಲೂಕು ಲೈಬ್ರೆರಿ ಅಧ್ಯಕ್ಷ ಕೆ. ಅಬ್ದುಲ್ಲ, ಜೊತೆ ಕಾರ್ಯದರ್ಶಿ ಕುಮಾರಿ ಟೀಚರ್, ಸಭೆಯಲ್ಲಿ ಮಾತನಾಡಿದರು. ಶಾಲಾ ಪಿ. ಟಿ. ಎ .ಸದಸ್ಯೆ ಬಿಂದು ಉಪಸ್ಥಿತರಿದ್ದರು. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ಸ್ವಾಗತಿಸಿ, ಇ.ಎಂ. ಎಸ್. ಗ್ರಂಥಾಲಯ ದ ಕಾರ್ಯದರ್ಶಿ ಚಂದ್ರಶೇಖರ. ಕೆ. ವಂದಿಸಿದರು.