ವಿಟ್ಲ: ಕುಂಡಡ್ಕ ಬೇರಿಕೆ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಂಘದ ಅಧ್ಯಕ್ಷ ಹರೀಶ್ ಮರುವಾಳ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಎಲ್ಯಣ್ಣ ಪೂಜಾರಿ ಮೈರುಂಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕೆಮನಾಜೆ, ಕಾರ್ಯದರ್ಶಿಯಾಗಿ ಮೋಹನ್ ಗುರ್ಜಿನಡ್ಕ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ, ಬದಿಗುಡ್ಡೆ ಕೋಶಾಧಿಕಾರಿಯಾಗಿ ಲೋಹಿತ್ ಪೂಜಾರಿ ಪಿಲಿಂಜ, ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ ಪಾದೆ, ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿಗೆ ಸದಸ್ಯರುಗಳಾಗಿ ಕೇಶವ ಪಾಂಡೇಲು, ಯಶಸ್ವಿ ಕಟ್ನಾಜೆ, ವೀರಪ್ಪ ಪೂಜಾರಿ ಪಿಲಿಂಜ, ರಾಜೇಶ ಪೂಜಾರಿ ಹಲಸಿನ ಕಟ್ಟೆ, ಅಕ್ಷಯಕುಂದರ್ ಮರುವಾಳ ಆಯ್ಕೆಗೊಂಡರು.
ಗೌರವಾಧ್ಯಕ್ಷರಾಗಿ ದೇಜಪ್ಪ ಪೂಜಾರಿ ನಿಡ್ಯ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಗೌರವ ಸಲಹೆಗಾರರಾಗಿ ನಾರಾಯಣ ಪೂಜಾರಿ ಕಟ್ನಾಜೆ, ಕೃಷ್ಣಪ್ಪ ಪೂಜಾರಿ ಜೇಡರಕೋಡಿ, ಜಯರಾಮ ಪೂಜಾರಿ ಕಾರ್ಯಾಡಿ ಗುತ್ತು, ಚಂದ್ರ ಪೂಜಾರಿ ಓಜಾಲ, ಕೃಷ್ಣಪ್ಪ ಪೂಜಾರಿ ಮೈರುಂಡ, ದಾಮೋದರ ಪೂಜಾರಿ ಹೊಸಮಾರು ಅವರನ್ನು ನೇಮಕ ಮಾಡಲಾಯಿತು.
ಸಂಘದ ಕಾರ್ಯದರ್ಶಿ ಹರೀಶ ನೀರಕೋಡಿ ಸ್ವಾಗತಿಸಿದರು. ಮೋಹನ್ ಗುರ್ಜಿನಡ್ಕ ವಂದಿಸಿದರು.