ಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಸಮಾಜಮುಖಿ ಕಾರ್ಯಗಳಲ್ಲಿ ಒಂದಾದ ಶೌರ್ಯ” ವಿಪತ್ತು ನಿರ್ವಹಣಾ ಘಟಕ ಕಳೆದ ನಾಲ್ಕು ವರ್ಷಗಳ ಹಿಂದೆ ಸಮಾಜಕ್ಕೆ ವರದಾನವಾಗುವ, ಆಪತ್ಕಾಲದಲ್ಲಿ ನೆರವಾಗುವ, ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ, ಸಂತ್ರಸ್ಥರ ಬದುಕಿಗೆ ಭರವಸೆಯಾಗಿರುವ, ಸ್ಥಳೀಯ ಯೋಧರಂತೆ ಕಷ್ಟ ಕಾರ್ಪಣ್ಯಗಳನ್ನು ಸ್ಪಂದಿಸಿ, ಸಮಾಜಪರ ಕೆಲಸಗಳನ್ನು ಮಾಡಲು ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ನಿರ್ವಹಣಾ ಕಾರ್ಯಕ್ರಮ ಪ್ರಾರಂಭಿಸಲಾಯಿತು. ರಾಜ್ಯದ 91 ತಾಲೂಕುಗಳಲ್ಲಿ 10,500ಕ್ಕೂ ಮಿಕ್ಕಿದ ಸ್ವಯಂಸೇವಕರ ಕಾರ್ಯಪಡೆ ವಿಪತ್ತು ಬರುವ ಸಂದರ್ಭಗಳಲ್ಲಿ ಸಮಾಜದ ಕಣ್ಣು, ಕಿವಿ, ಧ್ವನಿಯಾಗಿ ಕೆಲಸ ಮಾಡುತ್ತಿದೆ. ಈ ಅದ್ಭುತ ಕಲ್ಪನೆಯನ್ನು ಹುಟ್ಟು ಹಾಕಿ ಪ್ರಾರಂಭದಲ್ಲಿ ಈ ಕಾರ್ಯಕ್ರಮ ಈ ಹಂತಕ್ಕೆ ಬೆಳೆದು ನಿಲ್ಲಲು ಪ್ರೇರಣೆ ನೀಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃಡಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ. ಕಾರ್ಯನಿರ್ವಹಿಸುತ್ತಿದ್ದ ಡಾ. ಎಲ್.ಎಚ್. ಮಂಜುನಾಥ್. ಅವರ ನಿವೃತಿಯ ನಂತರ ಚಟುವಟಿಕೆಗಳನ್ನು ಗಮನಿಸಿ ಸದಾ ಪ್ರೋತ್ಸಾಹ ನೀಡುತ್ತಾ ಇದೀಗ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಮಾರ್ಗದರ್ಶನ ನೀಡುತಿರುವವರು ಶ್ರೀ ಅನಿಲ್ ಕುಮಾರ್ ಎಸ್ ಎಸ್.
ಶೌರ್ಯ ” ವಿಪತ್ತು ನಿರ್ವಹಣಾ ಕಾರ್ಯಕ್ರಮ ಬಹಳ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅದ್ಭುತವಾದ ಮಾರ್ಗದರ್ಶನ ನೀಡಿ . ವಿವಿಧ ಸೌಲಭ್ಯ, ತರಬೇತಿ ಸೌಕರ್ಯ ಹೊಂದಿರುವ “ಶೌರ್ಯ” ತಂಡವು ಸಮಾಜದಲ್ಲಿ ಸದಾ ಕಂಗೊಳಿಸುತ್ತಿದ್ದು ಮಾದರಿಯಾಗಿ ಕೆಲಸ ನಡೆಸುತ್ತಿದೆ. ಈ ಎಲ್ಲ ಸಾಧನೆಯಲ್ಲಿ ಸದಾ ಲವಲವಿಕೆ ಆಸಕ್ತಿಯಿಂದ ಕೂಡಿಕೊಂಡು ಕೆಲಸ ಮಾಡುವ ಯೋಜನೆಯ ಶ್ರೀ ಧರ್ಮಸ್ಥಳ “ಶೌರ್ಯ” ಸಮಿತಿ ಜೂನ್ 21 ಸ್ಥಾಪನೆಯಾಗಿ ಇವತು ನಾಲ್ಕನೇ ವಾರ್ಷಿಕೋತ್ಸವದ ಆಚರಿಸುತಿದೆ.
ಈ ಪುಟ್ಟ ನಾಲ್ಕು ವರ್ಷದ ಶೌರ್ಯವೆಂಬ ಮಗುವನ್ನು ಮತ್ತಷ್ಟು ಬಲಿಷ್ಠ ಗೊಳಿಸಿ ದೇಶ ಪ್ರೇಮ ಮೆರೆಯೋಣ. ದೇವರ ಪ್ರೀತಿಗೆ ಪಾತ್ರರಾಗೋಣ.ಯೋಜನೆಯ ಈ ಕಾರ್ಯಕ್ರಮ ಯಶಸ್ವೀ ಗೆ ಕಾರ್ಯ ನಿವಹಿಸುತಿರುವ
ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯ್ಸ್, ಶೌರ್ಯ ಸಮಿತಿಯ ಯೋಜನಾಧಿಕಾರಿಗಳಾದ
ಜೈವಂತ ಪಟಗಾರ್
ಕಿಶೋರ್ ಕುಮಾರ್,ಯೋಜನೆಯ ಎಲ್ಲಾ ಜಿಲ್ಲಾ ನಿರ್ದೇಶಕರುಗಳಿಗೆ ,ತಾಲೂಕು ಯೋಜನಾಧಿಕಾರಿಗಳಿಗೆ , ವಲಯಗಳ ಮೇಲ್ವಿಚಾರಕರುಗಳಿಗೆ ,
ಎಲ್ಲಾ ಘಟಕಗಳ ಸಂಯೋಜಕರುಗಳಿಗೆ , ಶೌರ್ಯ ತಂಡದ ಎಲ್ಲಾ ತಾಲೂಕು ಮಾಸ್ಟರ್ ಹಾಗೂ ಕ್ಯಾಪ್ಟನ್ ಗಳಿಗೆ , ಘಟಕಗಳ ಅಧ್ಯಕ್ಷರುಗಳಿಗೆ , ಎಲ್ಲಾ ಶೌರ್ಯ ಸದಸ್ಯರುಗಳಿಗೆ ಮನಪೂರ್ವಕ ಕೃತಜ್ಞತೆಗಳು.