ಪುತ್ತೂರು : ಹೊಟೇಲ್‌ವೊಂದರ ಸಪ್ಲಾಯರ್ ನಾಪತ್ತೆಯಾದ ಬಗ್ಗೆ ಅವರ ಪತ್ನಿ ಪುತ್ತೂರು ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಬೊಳುವಾರಿನ ನ್ಯೂ ಹೊಟೇಲ್ ಹರಿಪ್ರಸಾದ್‌ನಲ್ಲಿ ಸಪ್ಲಾಯರ್ ಆಗಿದ್ದ ಶಿವಪ್ಪ ಯಾನೆ ಶಿವಣ್ಣ (45) ನಾಪತ್ತೆಯಾದ ವ್ಯಕ್ತಿ.
ಶಿವಪ್ಪ ಅವರ ಪತ್ನಿ ಗೀತಾ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿವಪ್ಪ ಯಾನೆ ಶಿವಣ್ಣ ಬೊಳುವಾರು ನ್ಯೂ ಹರಿಪ್ರಸಾದ್ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಜೂ.10ರಂದು ಬೆಳಿಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿಲ್ಲ. ಆದರೆ ಈ ಹಿಂದೆಯೂ ಅದೇ ರೀತಿ ಮನೆಯಿಂದ ಹೋದವರು ವಾರ ಕಳೆದು ಬಂದಿದ್ದರು. ಹಾಗಾಗಿ ಅದೇ ರೀತಿ ಅವರು ಹಿಂದಿರುಗಿ ಬರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಈ ಬಾರಿ ಅವರು ಮನೆಯಿಂದ ಹೋಗಿ 10 ದಿನ ಆದರೂ ಬಂದಿಲ್ಲ. ಹಾಗಾಗಿ ಪುತ್ತೂರು ಆಸುಪಾಸಿನಲ್ಲಿ ಅವರ ಸ್ನೇಹಿತರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗೀತಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.