ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 – 25

Share with

ಉಪ್ಪಳ :ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.
ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ ,ಯೋಗದ ಮಹತ್ವವನ್ನು ತಿಳಿಸಿದರು. “ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ರೋಗ ದೂರ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು”.
ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ “ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ” ಎಂದರು.ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್, ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು.
ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿದರು, ಶಶಿಧರ ಕೆ ವಂದಿಸಿದರು.ನಂತರ ಯೋಗ ಶಿಕ್ಷಕಿ ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.


Share with

Leave a Reply

Your email address will not be published. Required fields are marked *