ಮಂಗಲ್ಪಾಡಿ: ಬಿಎಂಎಸ್ ನಿರ್ಮಾಣ ಕಾರ್ಮಿಕರ ಪ್ರತಾಪನಗರ ಯೂನಿಟ್‌ನಲ್ಲಿ ಪ್ರವಾಸ ಯೋಜನಾ ಸಭೆ ಪ್ರತಾಪನಗರದ ಗಾಯತ್ರಿ ಮಂದಿರದಲ್ಲಿ ಜರುಗಿತು ಸಭೆಯ ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷ ಕಿಶೋರ್ ಕುಮಾರ್ ವಹಿಸಿದರು. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹರೀಶ್ ಕುದ್ರಪ್ಪಾಡಿ ಉದ್ಘಾಟಿಸಿದರು. ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಕೋಶಾಧಿಕಾರಿ ಐತ್ತಪ್ಪ ನಾರಾಯಣ ಮಂಗಲ ಪ್ರವಾಸ ಯೋಜನೆಯ ಉದ್ದೇಶವನ್ನು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಶುಭಾಂಶನೆಗೈದರು. ನಳಿನಾಕ್ಷ ಸ್ವಾಗತಿಸಿ, ಪ್ರಕಾಶ್ ವರದಿಸಿದರು.