ಉಡುಪಿ: ಶಂಕರನಾರಾಯಣ ಪೊಲೀಸ್ ಠಾಣೆಯ ಸಮೀಪದ ಸರ್ಕಲ್ ಬಳಿ ಮಲಗಿದ್ದ ದನವನ್ನು ಕಳ್ಳರು ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋದ ಘಟನೆಯು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೂರಾಲ್ಕು ಮಂದಿ ಕಳ್ಳರು ಐಶಾರಾಮಿ ಕಾರಿನಲ್ಲಿ ಬಂದು ಮಲಗಿದ್ದ ದನವನ್ನು ಕಾರಿನ ಹತ್ತಿರಕ್ಕೆ ಎಳೆದು ತಂದು ಎತ್ತಿ ಕಾರಿನೊಳಕ್ಕೆ ತಳ್ಳುತ್ತಾರೆ. ಬಳಿಕ ದುಷ್ಕರ್ಮಿಗಳು ಮತ್ತೊಂದು ದನವನ್ನು ಕಳವು ಮಾಡಲು ಯತ್ನಿಸಿದ್ದಾರೆ.
ಬಸ್ ನಿಲ್ದಾಣದ ಬಳಿ ಇದ್ದ ಬೀಟ್ ಪೊಲೀಸರು ಓಡಿ ಬಂದಾಗ ತಾವು ಬಂದ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಓಡಿ ಬಂದ ಬೀಟ್ ಪೊಲೀಸ್ ಒಬ್ಬರು ದನ ಕಳ್ಳರನ್ನು ಹಿಡಿಯಲೆತ್ನಿಸಿದಾಗ, ದನ ಕಳ್ಳರು ಒಮ್ಮೆಲೆ ಕಾರನ್ನು ಮೈಮೇಲೆ ಚಲಾಯಿಸಲು ಯತ್ನಿಸಿದ್ದಾರೆ. ಶಂಕರನಾರಾಯಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.