ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಗಾಳಿಮಳೆ ಸುರಿದಿದೆ. ಗಾಳಿ ಮಳೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಮುಂಗಾರು ಆರ್ಭಟದ ನೇರ ಪರಿಣಾಮ ಬಿದ್ದಿರೋದು ಮೆಸ್ಕಾಂ ಇಲಾಖೆ ಮೇಲೆ. ಕಳೆದ ಎರಡು ದಿನಗಳ ಬಿರುಗಾಳಿ ಮಳೆಗೆ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಿಲ್ಲೆಯಾದ್ಯಂತ ಧರೆಗುರುಳಿ ಸಂಪೂರ್ಣ ಹಾನಿಗೊಂಡಿವೆ. ಇದರಿಂದಾಗಿ ಸುಮಾರು 30 ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿದೆ. ಸುಮಾರು ಮೂರು ಕಿಲೋಮೀಟರ್ ನಷ್ಟು ವಿದ್ಯುತ್ ತಂತಿಗಳು ತುಂಡಾಗಿದ್ದು ಅವುಗಳನ್ನ ರಿಪ್ಲೇಸ್ ಮಾಡಬೇಕಾಗಿದೆ. ಸುಮಾರು 200ಕ್ಕೂ ಹೆಚ್ಚು ಕಂಬಗಳು ವಾಲಿದ್ದು ಅದನ್ನು ಮತ್ತೆ ಸಮಸ್ಥಿತಿಗೆ ತರುವ ಕೆಲಸಗಳನ್ನು ಮೆಸ್ಕಾಂ ಸಿಬ್ಬಂದಿಗಳು ಮಾಡುತ್ತಿದ್ದಾರೆ.