ಆ್ಯಪ್ ಡೌನ್‌ಲೋಡ್ ಮಾಡಿ ವಂಚನೆಗೊಳಗಾದ ಮಹಿಳೆ!

Share with

ಮಣಿಪಾಲ: ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ತಿಳಿಸಿ ಮಹಿಳೆಯ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಎಗರಿಸಿದ ಘಟನೆ ನಡೆದಿದೆ.
ಮಣಿಪಾಲದ ಮಹಿಳೆಯೊಬ್ಬರು ಜು. 1ರಂದು ಝೂಮ್ಯಾಟೋ ಆ್ಯಪ್‌ನಲ್ಲಿ ಬೆಳಗ್ಗಿನ ಉಪಾಹಾರವನ್ನು ಆರ್ಡರ್ ಮಾಡಿದ್ದರು. ಅದರಲ್ಲಿದ್ದಂತೆ 196 ರೂ. ಪಾವತಿಸಿದ್ದರು. ಆದರೆ ಅವರಿಗೆ ಬಿಲ್ ಮೊತ್ತ 149 ರೂ. ಎಂದು ಬಂದಿದೆ. ಈ ಬಗ್ಗೆ ದೂರು ನೀಡಲು ಅವರು ಝೂಮ್ಯಾಟೋ ಆ್ಯಪ್‌ನ ಕಸ್ಟಮರ್ ಕೇರ್ ಸಂಖ್ಯೆಯನ್ನು ಸರ್ಚ್ ಮಾಡಿ ಅದರಲ್ಲಿ ದೊರೆತ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದಾತ, 47 ರೂ.ಗಳನ್ನು ವಾಪಸು ಮಾಡುತ್ತೇವೆ; ជ Avval Desk Remote Desktop App ಡೌನ್‌ಲೋಡ್ ಮಾಡಿ ಎಂದು ತಿಳಿಸಿದ.

ಅದರಂತೆ ಮಹಿಳೆಯು ಆ್ಯಪ್‌ ಡೌನ್‌ಲೋಡ್‌ ಮಾಡಿದರು. ಅನಂತರ ಆ ವ್ಯಕ್ತಿ ಗೂಗಲ್‌ ಪೇ ಓಪನ್‌ ಮಾಡಿ ಅವರ ಮೊಬೈಲ್‌ ಸಂಖ್ಯೆಯ ಮೊದಲ ನಾಲ್ಕು ಸಂಖ್ಯೆಯನ್ನು ಡಯಲ್‌ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಡಯಲ್‌ ಮಾಡಿದಾಗ ಬ್ಯಾಂಕ್‌ ಖಾತೆಯಿಂದ 96,081 ರೂ. ಕಡಿತವಾಗಿದೆ. ಝೊಮ್ಯಾಟೋ ಕಸ್ಟಮರ್‌ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಆ ವ್ಯಕ್ತಿ ಸುಳ್ಳು ಹೇಳಿ ಮೋಸ ಎಸಗಿದ್ದಾನೆ ಎಂದು ಅವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *