ಸಿಯೋಲ್: ಉದ್ಯೋಗ ಕ್ಷೇತ್ರದಲ್ಲಿ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿ ರುವ ಅನೇಕ ವರದಿಗಳು ಆಗಿವೆ. ಆದರೆ ದಕ್ಷಿಣ ಕೊರಿಯಾದಲ್ಲಿ ವಿಚಿತ್ರ ವೆಂಬಂತೆ ಕೆಲಸದ ಒತ್ತಡದಿಂದ ರೋಬೋಟ್ ಒಂದು ಆತ್ಮಹತ್ಯೆ ಮಾಡಿ ໖໖. ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದ.ಕೊರಿಯಾದ ಗುಮಿ ನಗರ ಪಾಲಿಕೆ ಕಚೇರಿಯಲ್ಲಿ ಸೇವೆಯಲ್ಲಿ ತೊಡ ಗಿಕೊಂಡದ್ದ ರೋಬೋಟ್, ಕಚೇರಿ ಮೆಟ್ಟಿಲುಗಳಿಂದ ಜಿಗಿದಿದೆ. ಪರಿಣಾಮ ಅದರ ಭಾಗಗಳು ನಾಶವಾಗಿವೆ. ಬಿಡಿ ಭಾಗಗಳನ್ನು ಸಂಗ್ರಹಿಸಲಾಗಿದ್ದು, ಘಟನೆ ಹಿಂದಿನ ಕಾರಣವನ್ನು ಪರಿಶೀಲಿಸಲಾಗುವುದು ಎಂದು ರೋಬೋಟ್ ಕಂಪೆನಿ ತಿಳಿಸಿದೆ.
ಬಹುಮುಖಿ ರೋಬೋಟ್: ಬೇರ್ ರೋಬೋಟಿಕ್ಸ್ ಕಂಪೆನಿ ಅಭಿವೃದ್ಧಿ ಪಡಿಸಿದ ಈ ರೋಬೋಟ್ 2023ರಿಂದ ಗುಮಿ ನಗರ ಪಾಲಿಕೆಯಲ್ಲಿ ಕಾರ್ಯ ನಿರ್ವ ಹಿಸುತ್ತಿತ್ತು. ಕಡತಗಳ ವಿತರಣೆ, ನಗರದ ಪ್ರಚಾರ, ಅಗತ್ಯ ಮಾಹಿತಿಗಳ ಪೂರೈಕೆ ಸೇರಿ ಬಹುಮುಖೀಯಾಗಿ ಕೆಲಸ ಮಾಡುತ್ತಿತ್ತು. ರೋಬೋಟ್ ಆತ್ಮಹತ್ಯೆ ದ.ಕೊರಿಯಾದಲ್ಲೇ ಮೊದಲ ಘಟನೆ ಯಾಗಿದೆ. ಜಾಲತಾಣಗಳಲ್ಲಿ ರೋಬೋಟ್ ಬಗ್ಗೆ ನೆಟ್ಟಿಗರಿಂದ ವಿಷಾದ, ಅನುಕಂಪದ ಮಾತುಗಳು ಕೇಳಿಬಂದಿವೆ.