ಬಂಟ್ವಾಳ : ನಾರಾಯಣ ಗುರುಗಳ ಸಂದೇಶದ ಜೊತೆ ಯುವವಾಹಿನಿ ಸದಸ್ಯರ ಬಾಂದವ್ಯದ ಬೆಸುಗೆ ಬಲಿಷ್ಟವಾಗುತ್ತದೆ ಸಮಾಜದ ಸ್ವಾಸ್ತ್ಯ ಮತ್ತು ಸಂಘಟನೆಗೆ ಈ ರೀತಿಯ ಕಾರ್ಯಕ್ರಮದ ಅಗತ್ಯ ಇದೆ ಎಂದು ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ಅಭಿಪ್ರಾಯ ಪಟ್ಟರು.
ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ. )
ಬಂಟ್ವಾಳ ಘಟಕ ಇದರ ವತಿಯಿಂದ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏಲಬೆ ನಾಗೇಶ್ ಪೂಜಾರಿ ಯವರ ಮನೆಯಲ್ಲಿ
ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ “ಗುರುತತ್ವವಾಹಿನಿ” ಮಾಲಿಕೆ-1 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು. ಈ ಸಂದರ್ಭದಲ್ಲಿ ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ , ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಮಾಜಿ ಅಧ್ಯಕ್ಷರು ಪ್ರೇಮನಾಥ ಕೆ. ಶಿವಾನಂದ, ರಾಜೇಶ್ ಸುವರ್ಣ , ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ಸಾಂಸ್ಕೃತಿಕ ನಿರ್ದೇಶಕರು ಧನುಷ್ ಮದ್ವ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಮಹಿಳಾ ನಿರ್ದೇಶಕಿ ಹರಿಣಾಕ್ಷಿ, ಆರೋಗ್ಯ ನಿರ್ದೇಶಕರು ಮಹೇಶ್ , ಸದಸ್ಯ ಪ್ರಶಾಂತ್ ಏರಮಲೆ ಮತ್ತಿತರು ಉಪಸ್ಥಿತರಿದ್ದರು.