ಮೆದುಳು ತಿನ್ನೋ ಅಮೀಬಾ… ಕೇರಳದಲ್ಲಿ 4ನೇ ಕೇಸು ಪತ್ತೆ

Share with

ಕಲ್ಲಿಕೋಟೆ: ಅಪರೂಪದ “ಮೆದುಳು ತಿನ್ನುವ ಅಮೀಬಾ’ ಕೇರಳದಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ಶನಿವಾರ ಮತ್ತೂಂದು ಪ್ರಕರಣ ದೃಢಪಟ್ಟಿದೆ. ಈಗಾಗಲೇ ಈ ಸೋಂಕು 2 ತಿಂಗಳಲ್ಲಿ 3 ಮಕ್ಕಳನ್ನು ಬಲಿಪಡೆದುಕೊಂಡಿದೆ.

ತೀವ್ರ ತಲೆನೋವು, ವಾಕರಿಕೆ, ವಾಂತಿ ಹಿನ್ನೆಲೆಯಲ್ಲಿ ಉತ್ತರ ಕೇರಳದ ಪಯ್ಯೋಳಿಯ 14 ವರ್ಷದ ಬಾಲಕ ನನ್ನು ಜೂ.24ರಂದು ಆಸ್ಪತ್ರೆಗೆ ದಾಖಲಿ ಸಲಾಗಿದೆ. ಈತನಿಗೂ ಮೆದುಳು ತಿನ್ನುವ ಅಮೀಬಾ ಸೋಂಕು ಇರುವು ದು ದೃಢಪಟ್ಟಿದೆ. ಕೂಡಲೇ ಬಾಲಕನಿಗೆ ವಿದೇಶದಿಂದ ಆಮದು ಮಾಡಲಾದ ಔಷಧ ಸೇರಿ ಎಲ್ಲ ಚಿಕಿತ್ಸೆಗಳನ್ನೂ ನೀಡ ಲಾಗುತ್ತಿದ್ದು, ಆರೋಗ್ಯಸುಧಾರಣೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೊರೆಯಲ್ಲಿ ಸ್ನಾನ ಮಾಡುವಾಗ ಸೋಂಕು ತಗಲಿರುವ ಶಂಕೆ ಇದೆ.

ಏನಿದು ಮೆದುಳು ತಿನ್ನುವ ಅಮೀಬಾ?
ನೆಗ್ಲೆರಿಯಾ ಫೌಲೇರಿ(ಮೆದುಳು ತಿನ್ನುವ ಅಮೀಬಾ) ಎನ್ನುವುದು ಅಪರೂಪದ ಹಾಗೂ ಅಪಾಯ ಕಾರಿ ಸೂಕ್ಷ್ಮಾಣು ಜೀವಿಯಾಗಿದ್ದು, ಮನುಷ್ಯನ ಮೆದುಳಿನಲ್ಲಿ ಗಂಭೀರ ಸೋಂಕು ಉಂಟು ಮಾಡುತ್ತದೆ. ಕಲುಷಿತ ನೀರಿನಲ್ಲಿರುವ ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾವು ಮೂಗಿನ ಮೂಲಕ ನಮ್ಮ ಶರೀರ ಸೇರುತ್ತದೆ. ಇದು ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡಿ, ವ್ಯಕ್ತಿಯ ಸಾವಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *