ಕುಂಬಳೆ : ಮೊಗ್ರಾಲ್ ನಾಂಗಿ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಎರಡು ವರ್ಷಗಳ ಹಿಂದೆ ನಿರ್ಮಿಸಿದ ಬೀಚ್ ವ್ಯೂ ರೆಸಾರ್ಟ್ ಸಮುದ್ರ ಪಾಲಾಗುವ ಭೀತಿಯಲ್ಲಿದೆ.
ರೆಸಾರ್ಟ್‌ನ ಆವರಣ ಗೋಡೆ ಹಾಗೂ ಒಂದು ಭಾಗ ಈಗಾ ಗಲೇ ಸಮುದ್ರ ಪಾಲಾಗಿದೆ. ವರ್ಷಗಳ ಹಿಂದೆ ಇಲ್ಲಿದ್ದ ಮೊಹಮ್ಮದ್ ಹಾಗೂ ಖಾಲಿದ್ ಅವರ ಮನೆ ಸಮುದ್ರ ಪಾಲಾಗಿತ್ತು. ಇದರ ಬಳಿಯಲ್ಲೇ ರೆಸಾರ್ಟ್ ನಿರ್ಮಿಸಲಾಗಿದೆ.