ಉಪ್ಪಳ: ಸೇವಾಭಾರತಿ ಜೋಡುಕಲ್ಲು ಇದರ ಕೇಶವ ಶಿಶು ಮಂದಿರದಿoದ ಸೇವಾ ನಿಧಿಯ ಕಾಣಿಕೆ ಡಬ್ಬಿಯನ್ನು ಹಾಡುಹಗಲೇ ಕಳವುಗೈದು ಪರಿಸರದ ಮನೆಯೊಂದರ ಜಗಲಿಯಲ್ಲಿ ಉಪೇಕ್ಷಿಸಿದ ಘಟನೆ ನಡೆದಿದೆ. ಜುಲೈ. 8ರಂದು ಮಧ್ಯಾಹ್ನ ಸುಮಾರು ೨ಗಂಟೆಯಿoದ ೫ಗಂಟೆಯ ಮಧ್ಯೆ ಕಳವು ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ. ಸಂಜೆ ಪರಿಸರದ ಮನೆಯ ಜಗಲಿಯಲ್ಲಿ ಕಾಣಿಕಿಕೆ ಡಬ್ಬಿಯೊಂದು ಪತ್ತೆಯಾಗಿದೆ. ಈ ಬಗ್ಗೆ ಶಿಶು ಮಂದಿರದ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಶಿಶಿ ಮಂದಿರದ ಕಾಣಿಕೆ ಡಬ್ಬಿಎಂದು ತಿಳೀದು ಬಂದಿದೆ. ಕೂಡಲೇ ಶಿಶು ಮಂದಿರಕ್ಕೆ ತೆರಳಿ ನೋಡಿದಾಗ ಎದುರು ಬಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳ್ಳರು ಹಣ ಹೊಂದಿರುವ ಕಾಣಿಕೆ ಡಬ್ಬಿಯನ್ನು ಕಳವುಗೈದು ಅದರ ಬೀಗವನ್ನು ಮುರಿಯಲು ಸಾದ್ಯವಾಗದೆ ಬಿಟ್ಟುಹೋಗಿದ್ದಾರೆ. ಈ ಬಗ್ಗೆ ಶಿಶು ಮಂದಿರದ ಸಮಿತಿ ಕಾರ್ಯದರ್ಶಿ ಲೊಕೇಶ ನೊಂಡಾ ನೀಡಿದ ಮಾಹಿತಿಯಂತೆ ಮಂಜೇಶ್ವರ ಪೋಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ತಿಳೀದು ಸಮಿತಿ ಅಧ್ಯಕ್ಷ ದಾಮೋದರ ಉಬರ್ಲೆ ಸಹಿತ ಇತರ ಪದಾಧಿಕಾರಿಗಳು, ಊರವರು ತಲುಪಿದ್ದಾರೆ.