ಬಾಯಾರು: ಮುಳಿಗದ್ದೆ-ಬಳ್ಳೂರು ಲೋಕೋಪಯೋಗಿ ಇಲಾಖೆ ರಸ್ತೆಯ ಪೆರ್ವೋಡಿ ಎಂಬಲ್ಲಿ ರಸ್ತೆ ಕುಸಿದು ಬಿದ್ದು ಒಂದು ವರ್ಷ ಕಳೆಯುತ್ತಾ ಬಂದರೂ ದುರಸ್ಥಿಗೊಳಿಸದ ಹಿನ್ನೆಲೆಯಲ್ಲಿ ಮಳೆಗೆ ಇನ್ನಷ್ಟು ಕುಸಿದು ಬೀಳುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಭೀತಿ
ಸೃಷ್ಟಿಯಾಗಿದ್ದು, ದುರಸ್ಥಿಗೊಳೀಸದೆ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸುತ್ತಿರುವುದಾಗಿ ಆರೋಪಿಸಿ ಇಲಾಖೆ ಅಧಿಕಾರಿಗಳ ವಿರುದ್ದ ಬಿಜೆಪಿ ಪೈವಳಿಕೆ ಪಂಚಾಯತ್‌ನ ಪೆರ್ವೋಡಿ, ಬೆರಿಪದವ್ ಬೂತ್ ನೇತೃತ್ವದಲ್ಲಿ ಜುಲೈ 8ರಂದು ಸಂಜೆ ಕುಸಿದು ಬಿದ್ದ ರಸ್ತೆ ಪರಿಸರದಲ್ಲಿ
ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತಾರರಾದ ರವೀಂದ್ರ ಬೆರಿಪದವ್, ದೇವದಾಸ ಬೆರಿಪದವ್, ರಾಮಕೃಷ್ಣ ಬಲ್ಲಾಳ್, ಸೀನಾ ಪೆರ್ವೋಡಿ, ಪ್ರಭಾಕರ ನಾಯಕ್, ಬ್ಲೋಕ್ಪಂ ಚಾಯತ್ ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಪಂಚಾಯತ್ ಉಪಾಧ್ಯಾಕ್ಷೆ ಪುಷ್ಪಲಕ್ಷ್ಮಿ ಪಂಚಾಯತ್ ಸದಸ್ಯೆರಾದ ಕಮಲ.ಪಿ, ಜಯಲಕ್ಷ್ಮಿ ಭಟ್.ಕೆ, ಸಂತೋಷ್ಪಟ್ಲ, ಪ್ರವೀಣ ಪಟ್ಲ ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕೂಡಲೇ ದುರಸ್ಥಿಗೆ ಕ್ರಮಕೈಗೊಳ್ಳದಿದ್ದಲ್ಲಿ ಮುಂದೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಬೃಹತ್ ಪ್ರತಿಭಟನೆಗೆ ನಡೆಸುವುದಾಗಿ ಸಮಿತಿ ತಿಳಿಸಿದೆ.