ಉಪ್ಪಳ :ಐಲ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಸೇವಾ ಸಮಿತಿಯ ಮಹಾಸಭೆಯನ್ನು ಕ್ಷೇತ್ರದ ಆಡಳಿತ ಮೊಕ್ತೆಸರರಾದ ಕೋಡಿಬೈಲು ನಾರಾಯಣ ಹೆಗ್ಡೆ ಯವರು ಉದ್ಘಾಟಿಸಿದರು. ಮಜಲು ಶಂಕರ ನಾರಾಯಣ ಹೊಳ್ಳರು ಅಧ್ಯಕ್ಷತೆ ವಹಿಸಿದರು..ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಐಲ ವಾಚಿ ಸಿದರು .ಬಳಿಕ ನೂತನ ಸಮಿತಿ ಯನ್ನು ರಚಿಸಲಾಯಿತು.
ಸೇವಾ ಸಮಿತಿಯ ಗೌರವಧ್ಯಕ್ಷರಾಗಿ ಸಿ .ಎಸ್. ಕೃಷ್ಣಪ್ಪ ಐಲ ಹಾಗೂ ಗೌರವ ಸಲಹೆಗಾರರಾಗಿ ಮಜಲು ಶಂಕರ ನಾರಾಯಣ ಹೊಳ್ಳ ,ಅಧ್ಯಕ್ಷರಾಗಿ ಲಕ್ಷ್ಮಣ ಕುಂಬ್ಳೆ. ಸುದೀಶ್ ಚಂದ್ರ ಶೆಟ್ಟಿ ಹಾಗೂ ವಸಂತ ಕುಮಾರ ಮಯ್ಯ ಇವರನ್ನು ಉಪಾಧ್ಯಕ್ಷರಾಗಿಯೂ. . . . ಪ್ರಧಾನ ಕಾರ್ಯದರ್ಶಿ ಯಾಗಿ ಮೋಹನ್ ದಾಸ್ ಐಲ ಹಾಗೂ ಸಂತೋಷ್ ಐಲ, ಮತ್ತು ಭರತ್ ರೈ ಕೋಡಿ ಬೈಲು ಇವರನ್ನು ಜತೆ ಕಾರ್ಯದರ್ಶಿ ಯಾಗಿ ನೇಮಿಸಲಾಯಿತು. ಕೆ ನಾರಾಯಣ ಹೆಗ್ಡೆ ಇವರನ್ನು ಕೋಶಾಧಿಕಾರಿಯಾಗಿಯೂ , ಶಿವಾನಂದ ಮಯ್ಯ ಐಲ ಇವರನ್ನು ಲೆಕ್ಕ ಪರಿಶೋಧಕರಾಗಿಯೂ ಅಲ್ಲದೇ 28 ಜನರ ಕಾರ್ಯಕಾರಿ ಸಮಿತಿ ಯನ್ನು ರಚಿಸಲಾಯಿತು.
ಶ್ರೀ ಕ್ಷೇತ್ರದ ಉತ್ಸವಾಂಗಣ ವಾದ ಐಲ ಮೈದಾನದಲ್ಲಿಯೇ ತಾಲುಕು ಕಛೇರಿ ನಿರ್ಮಿಸುವ ಇರಾದೆಯನ್ನು ಸರಕಾರ ಪುನಃ ಪುನಃ ವ್ಯಕ್ತಪಡಿಸಿ ಸ್ಥಳ ಕಬಳಿಸುವ ಪ್ರಯತ್ನ ನಡೆಸುವ ವಿರುದ್ಧ ಸೂಕ್ತ ನಿರ್ಧಾರ ಕೈಗೊಳ್ಳಲು ಬೃಹತ್ ಭಕ್ತರ ಸಭೆಯನ್ನು ಕ್ಷೇತ್ರದಲ್ಲಿ ಜುಲಾಯಿ ತಿಂಗಳ 21ರಂದು ಕರೆಯುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು .
ಕ್ಷೇತ್ರದ ಮೊಕ್ತೇಸರರಾದ ಶಿವರಾಮ ಪಕಳ ಡಾ| ಶ್ರೀರಾಜ್ ಹಾಗೂ ಕೃಷ್ಣ ಕುಮಾರ್ ಐಲ ಉಪಸ್ಥಿತರಿದ್ದರು. ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ಎಸ್ ಕೃಷ್ಣಪ್ಪ ಹಾಗೂ ಅರ್ಚಕರಾದ ಶಿವಾನಂದ ಮಯ್ಯ ಸೂಕ್ತ ಸಲಹೆ ಸೂಚನೆ ನೀಡಿದರು.
ಮೋಹನದಾಸ್ ಐಲ ಸ್ವಾಗತಿಸಿ , ಅನಿಲ್ ಬತ್ತೇರಿ ಧನ್ಯವಾದವಿತ್ತರು