ಉಪ್ಪಳ: ಕರುಳು ಸಂಬಧ ಅಸೌಖ್ಯದಿಂದ ಕಾಲೇಜು ವಿದ್ಯಾರ್ಥಿನಿ ನಿಧನ ಹೊಂದಿದ್ದಾಳೆ. ಮೂಲತ ಸೋಂಕಾಲು ಬಳಿಯ ಕೊಡಂಗೆ ನಿವಾಸಿಯೂ ಇದೀಗ ಕರ್ನಾಟಕದ ಕೋಟೆಕಾರ್ನಲ್ಲಿ ವಾಸವಾಗಿರುವ ಸೋಂಕಾಲಿನಲ್ಲಿ ಹಿರಿಯ ವ್ಯಾಪಾರಿ ಹಾಗೂ ಕಾರವಲ್ ಪತ್ರಿಕೆಯ ಏಜಂಟ್ರಾಗಿರುವ ಹರೀಶದಾಸ್ ರವರ ಪುತ್ರಿ ಕಾಲೇಜು ವಿದ್ಯಾರ್ಥಿನಿ ಇಂಚರ [೧೬] ಜುಲೈ. 10ರಂದು ಮಧ್ಯಾಹ್ನ ದೇರಳಕಟ್ಟೆ ಯೆನೋಪಯಿ ಆಸ್ಪತ್ರೆಯಲ್ಲಿ ನಿಧನರಾದಳು. ಉಳ್ಳಾಲ ಪರಿಜ್ಞಾನ ಕಾಲೇಜು ಪ್ಲಸ್-ವನ್ ವಿದ್ಯಾರ್ಥಿನಿಯಾದ ಈಕೆ ಕರುಳು ಸಂಬoಧ ಅಸೌಖ್ಯದಿಂದ ಕಳೆದ ಒಂದು ವಾರದ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾಳೆ. ಮೃತಳು ತಂದೆ, ತಾಯಿ ಚೈತ್ರ, ಸಹೋದರಿ ಸೃಷ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸoಸ್ಕಾರ ಸಂಜೆ ಮಾಡೂರು ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು.