ಕಾಸರಗೋಡು : ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಪಂಜಿಕಲ್ಲು ಎಸ್.ವಿ.ಎ.ಯು.ಪಿ. ಶಾಲಾ ಪರಿಸರದಲ್ಲಿ ಒಂದು ದಿನ ಪ್ರಾಯದ ಹೆಣ್ಣು ಶಿಶುವೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಆದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಶಿಶುವನ್ನು ಶಾಲಾ ಪರಿಸರದಿಂದ ರಕ್ಷಿಸಿ ಠಾಣೆಗೆ ತಂದು ಕಾಸರಗೋಡಿನ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಆರೋಗ್ಯವಾಗಿದೆ.
ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಗುವಿನ ಹೆತ್ತವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜನ್ಮ ನೀಡಿದ ಬಳಿಕ ಶಾಲಾ ಪರಿಸರದಲ್ಲಿ ಮಗುವನ್ನು ಉಪೇಕ್ಷಿಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.