ಮಂಜೇಶ್ವರ: ೨.೯ಗ್ರಾಂ ಎಂಶಿಎoಎ ಸಹಿತ ಇಬ್ಬರನ್ನು ಮಂಜೇಶ್ವರ ಪೋಲೀಸರು ಸೆರೆಹಿಡಿದಿದ್ದಾರೆ. ಕೋಯಿಕ್ಕೋಡು ನಿವಾಸಿಗಳಾದ ತಹಸಿಲ್ [೩೨], ಫವಾಜ್ [೨೫] ಎಂಬಿವರು ಸೆರೆಗೀಡಾಗಿದ್ದಾರೆ. ಜುಲೈ ೧೪ರಂದು ಮಧ್ಯಾಹ್ನ ಮಂಜೇಶ್ವರ ಠಾಣೆಯ ಎಸ್.ಐ ನಿಖಿಲ್ ರವರು ಗಸ್ತು ನಡೆಸುತ್ತಿದ್ದಾಗ ಹೊಸಂಗಡಿಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು ತಪಾಸಣೆ ನಡೆಸಿದಾಗ ಈ ಮಾದಕವಸ್ತು ಪತ್ತೆಯಾಗಿದೆ. ಇವರನ್ನು ಸೆರೆಹಿಡಿದು ಕೇಸು ದಾಖಲಿಸಿದ್ದಾರೆ.