ನಿಂತಿದ್ದ ಬಸ್ಸಿಗೆ ಹಿಂದಿನಿಂದ ಸ್ಕೂಟರ್ ಢಿಕ್ಕಿ: ಸವಾರ ಗಂಭೀರ

Share with

ಉಡುಪಿ: ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗುಂಡಿಬ್ಯೆಲು ನಿವಾಸಿ ಲಕ್ಷ್ಮಣ (60)ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಮಾಜಸೇವಕ ಈಶ್ವರ ಮಲ್ಪೆ ಮತ್ತು ತಂಡದವರು ಸಹಕರಿಸಿದರು. ಇವರಿಗೆ ಗುಂಡಿಬ್ಯೆಲಿನಲ್ಲಿ ವರ್ಕ್ ಶಾಪ್ ಇದೆ ಎನ್ನಲಾಗುತ್ತಿದೆ. ಮಲ್ಪೆ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿಯ ರಭಸಕ್ಕೆ ಬಸ್ ನ ಹಿಂಭಾಗ ಜಖಂಗೊಂಡಿದೆ.


Share with

Leave a Reply

Your email address will not be published. Required fields are marked *