ಮಂಥನ’ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ ಕಾರ್ಯಕ್ರಮ

Share with

ಬಂಟ್ವಾಳ : ಸಿದ್ಧಕಟ್ಟೆ ಜವನೆರೆ ತುಡರ್ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ‘ಮಂಥನ’ ರಾಷ್ಟ್ರೀಯ ಶೈಕ್ಷಣಿಕ ಕಾರ್ಯಾಗಾರ, ರಕ್ತದಾನ ಶಿಬಿರ ಸಂಪನ್ನಗೊಂಡಿತು

ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್, ಸ್ಮಿತೇಶ್ ಬಾರ್ಯ, ನಾರಾಯಣ ನಾಯಕ್ ಕರ್ಪೆ, ಮಹೇಶ್ ಕರ್ಕೇರ ಕಾರ್ಯಾಗಾರ ನಡೆಸಿಕೊಟ್ಟರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಚೇತನ್ ಮುಂಡಾಜೆ ಸಂಯೋಜಕರಾಗಿದ್ದರು. 179 ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.

ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. 40 ಬಾರಿ ರಕ್ತದಾನಗೈದ ಆಟೋ ಚಾಲಕ ಗಂಗಾಧರ್ ಪೂಜಾರಿ ಕರ್ಪೆ ಅವರನ್ನು ಸನ್ಮಾನಿಸಲಾಯಿತು. ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಅವರಿಗೆ ‘ಸೇವಾ ತುಡರ್ 2024’ ಪ್ರಶಸ್ತಿ ಪ್ರದಾನಿಸಲಾಯಿತು. ಕೃಷಿಕ ಮೈಕಲ್ ಡಿಕೋಸ್ತರನ್ನು ಅಭಿನಂದಿಸಲಾಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 70 ಮಂದಿ ರಕ್ತದಾನ ಮಾಡಿದರು.
ಗುರುಚೈತನ್ಯ ಸೇವಾಶ್ರಮ ಗುಂಡೂರಿಯ ಆಶ್ರಮಕ್ಕೆ ತೆರಳಿ ಆಶ್ರಮವಾಸಿಗಳಿಗೆ ಊಟ ನೀಡಿಲಾಯಿತು.

ಹ್ಯುಮ್ಯಾನಿಟಿ ಸಂಸ್ಥಾಪಕ ರೋಷನ್ ಬೆಳ್ಮಣ್, ಸ್ವರ್ಣ ಸಂಜೀವಿನಿ ಸಂಸ್ಥಾಪಕ ಸಚಿನ್ ಸುವರ್ಣ, ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ, ಟ್ರಸ್ಟ್ ಸದಸ್ಯ ಸುರೇಶ್ ಸುವರ್ಣ, ಅಶ್ವತ್ಥ್ ಅರಳ, ಪ್ರಶಾಂತ್ ಅಳಕೆ, ರಂಜಿತ್ ಶೆಟ್ಟಿ, ಸಂತೋಷ್ ಬಂಗೇರ, ಪ್ರದೀಪ್, ನಿತಿನ್ ಉಪಸ್ಥಿತರಿದ್ದರು. ಟ್ರಸ್ಟ್ ಸಂಸ್ಥಾಪಕ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *