ಮಂಜೇಶ್ವರ: ಹೊಸಂಗಡಿಯಲ್ಲಿ ನಿರ್ಮಿಸಿದ ಸರ್ವೀಸ್ ರಸ್ತೆ ರಾತ್ರಿ ದಿಡೀರನೆ ಕುಸಿದು ಬಿರುಕು ಬಿಟ್ಟಿರುವುದು ಸಾರ್ವಜನಿಕರಲ್ಲಿ ಆತಂಕವನ್ನುoಟುಮಾಡಿದೆ. ತಲಪಾಡಿ ಭಾಗದಿಂದ ಕಾಸರಗೋಡಿನತ್ತ ಸಂಚರಿಸುವ ಸರ್ವೀಸ್ ರಸ್ತೆ ಇದಾಗಿದ್ದು, ಇದೀಗ ವಾಹನ ಸಂಚಾರ ಅಪಾಯಕಾರಿಯಾಗಿದೆ. ಇಲ್ಲಿನ ಸಂಕದ ಸಮೀಪದ ತಡೇಗೋಡೆ ಪರಿಸರದಲ್ಲಿ ಕುಸಿದು ಹೋಗಿ ರಸ್ತೆ ಬಿರುಕು ಬಿಟ್ಟಿದೆ. ಇದೀಗ ಈ ಪರಿಸರದಿದಲೇ ಬಸ್ ಸಹಿತ ಇತರ ವಾಹನಗಳು ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ. ಕಾಮಗಾರಿ ಪೂರ್ತಿಗೊಳಿಸಿ ಸರ್ವೀಸ್ ರಸ್ತೆಯನ್ನು ಸಂಚಾರಕ್ಕೆ ಬಿಟ್ಟುಕೊಡಲಾಗಿದ್ದು, ಆರಂಭದ ಮಳೆಗೆ ಕುಸಿದಿರುವುದು ಕಳಪೆ ಕಾಮಗಾರಿ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ದುರಸ್ಥಿಗೊಳಿಸದೆ ಸಂಚಾರ ಮುಂದುವರಿದಲ್ಲಿ ತಡೆಗೋಡೆ ಬೀಳು ಸಾದ್ಯತೆಯಿದ್ದು, ಕೂಡಲೇ ದುರಸ್ಥಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.