ಆನೆಗುಂದಿಶ್ರೀ ಚಾತುರ್ಮಾಸ್ಯದ ಪೂರ್ವಭಾವಿ ಸಿದ್ದತಾ ಸಭೆ

Share with


ಪಡುಕುತ್ಯಾರು: ವ್ಯಕ್ತಿ ಮಾಡಿದ ಸತ್ಕಾರ್ಯಗಳು ಯಾವಾಗಲೂ ಅವನನ್ನು  ಅಮರವನ್ನಾಗಿಸುತ್ತದೆ. ಆದ್ದರಿಂದ  ಪ್ರತಿಯೊಬ್ಬರು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಬೇಕು ಎಂದು  ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ನುಡಿದರು. ಅವರು  ಶ್ರೀಮಠದಲ್ಲಿ ನಡೆದ ಚಾತುರ್ಮಾಸ್ಯದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಆಶೀರ್ವಚನ ನೀಡಿದರು.   ಶ್ರೀಮಠಕ್ಕೆ  ವಿಜಯಪುರ ಹಾಗೂ ಅಥಣಿಯ ಭಕ್ತಾದಿಗಳು ಜಾಗ ನೀಡಿದ್ದು ಅಲ್ಲಿ ಮುಂದೆ ಶಾಖಾಮಠ ತೆರೆಯುವ ಗುರಿ ಇರಿಸಿಕೊಳ್ಳಲಾಗಿದೆ.    ಶ್ರೀಮಠದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯರು ಸಂಪೂರ್ಣ ವೆಚ್ಚ ಭರಿಸಿ  ಯಾಗಶಾಲೆಯನ್ನು ಪೂರ್ಣ ಪ್ರಮಾಣದಲ್ಲಿ  ನಿರ್ಮಿಸಿ ಶ್ರೀಮಠಕ್ಕೆ  ನಿರ್ಮಿಸಿಕೊಡುತ್ತಿದ್ದು ಅವರ  ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು.  ಸಭಾಧ್ಯಕ್ಷತೆಯನ್ನು  ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿ ಮಾತನಾಡಿ ಚಾತುರ್ಮಾಸ್ಯ ಕಾರ್ಯಕ್ರಮಗಳನ್ನು   ಭಕ್ತಾದಿಗಳು  ತನು,ಮನ,ಧನಗಳೊಂದಿಗೆ ಸಹಕರಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
   ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ ಇವರು ಮಾತನಾಡಿ ಮಾತೃ ಮಂಡಳಿ ವತಿಯಿಂದ ಲಲಿತಾ ಸಹಸ್ರನಾಮ, ಭಗವದ್ಗೀತೆಯ ಮುಖ್ಯಾಂಶಗಳು, ವಿಶ್ವಕರ್ಮ, ಕಾಳಿಕಾಂಬಾ ಸ್ತೋತ್ರಗಳು, ವಿಷ್ಣುಸಹಸ್ರನಾಮ, ಹನುಮಾನ್ ಚಾಲೀಸ್, ಇನ್ನಿತರ ಶ್ಲೋಕಗಳನ್ನು ಸೇರಿದ ಪುಸ್ತಕ ಚಾತುರ್ಮಾಸ್ಯದ ವೇಳೆ ಬಿಡುಗಡೆಯಾಗಲಿದೆ ಎಂದು ನುಡಿದರು.
  ಸಭೆಯಲ್ಲಿ ಕರಸ್ಥಳ ಜಗದ್ಗುರು ಶ್ರೀ ನಾಗಲಿಂಗಸ್ವಾಮಿ, ಶ್ರೀ ವಿಶ್ವಕರ್ಮೇಶ್ವರ ಸಾನ್ನಿಧ್ಯವಿರುವ ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಇದರ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ,  ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ  ದೇವಸ್ಥಾನದ ಅಧ್ಯಕ್ಷ ಬಿ.ಎಂ. ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಕುಂಬಳೆ ಅರಿಕ್ಕಾಡಿ ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ಜನಾರ್ದನ ಆಚಾರ್ಯ ಅರಿಕ್ಕಾಡಿ, ಮಧೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ನ್ಯಾಯವಾದಿ ಕೆ.ಪ್ರಭಾಕರ ಆಚಾರ್ಯ ಕೋಟೆಕಾರು, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ತ್ರಾಸಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತೀ ಪೀಠ  ವಿಕಾಸ ಸಮಿತಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ನಾಗರಾಜ ಆಚಾರ್ಯ ಕಾಡಬೆಟ್ಟು, ಆನೆಗುಂದಿ ಗುರುಸೇವಾ ಪರಿಷತ್ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀಧರ್ ಜೆ. ಆಚಾರ್ಯ,  ಕೊಂಡೆವೂರು ಗಂಗಾಧರ ಆಚಾರ್ಯ,  ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ಜನಾರ್ದನ ಆಚಾರ್ಯ ಕನ್ಯಾನ, ಪ್ರಶಾಂತ್ ಆಚಾರ್ಯ ಕಟಪಾಡಿ, ಶ್ರೀಧರ ಜೆ ಆಚಾರ್ಯ ಕಟಪಾಡಿ, ಗುರುರಾಜ್ ಆಚಾರ್ಯ ಮಂಗಳೂರು, ವಾದಿರಾಜ್ ಆಚಾರ್ಯ ಮಂಗಳೂರು, ಆನೆಗುಂದಿ ಪ್ರತಿಷ್ಠಾನ ಮುಂಬಯಿ ವಲಯ ಕಾರ್ಯದರ್ಶಿ ಜಿ.ಟಿ.ಆಚಾರ್ಯ ಮುಂಬೈ (ಮೂಲ್ಕಿ),   ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ  ವೈ. ಆಚಾರ್ಯ ಬೆಳುವಾಯಿ, ರಮಾ ನವೀನ್ ಕಾರ್ಕಳ,ದೀಪಾ ಸುರೇಶ್ ಕಟಪಾಡಿ,ಲತಾ ಎಸ್ ಆಚಾರ್ಯ ಕುತ್ಯಾರು ಹಾಗೂ ಚಾತುರ್ಮಾಸ್ಯದ ವಿವಿಧ ಸಮಿತಿಗಳ ಪ್ರಮುಖರು ಭಾಗವಹಿಸಿದ್ದರು. ಸಭೆಯಲ್ಲಿ ಗುರು ಪಾದುಕಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಸಂತರ್ಪಣೆ, ಭಜನೆ , ಹೊರೆಕಾಣಿಕೆ ಸಮರ್ಪಣೆ, ದುರ್ಗಾ ನಮಸ್ಕಾರ ಸಹಿತ ಚಾತುರ್ಮಾಸ್ಯದ ಸಂದರ್ಭ ನಡೆಯುವ ಇನ್ನಿತರ ಕಾರ್ಯಕ್ರಮಗಳ ಯಶಸ್ಸಿನ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿಯ ಪ್ರದಾನ ಕಾರ್ಯದರ್ಶಿ ಶ್ರೀ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ  ಜನಾರ್ದನ ಆಚಾರ್ಯ ಕನ್ಯಾನ  ವಂದಿಸಿದರು.


Share with

Leave a Reply

Your email address will not be published. Required fields are marked *