ಮೂಸೋಡಿಯಲ್ಲಿ ಮತ್ತೊಂದು ಮನೆ ಸಮುದ್ರ ಪಾಲು ಅಧಿಕಾರಿಗಳ ಭೇಟಿ

Share with


ಉಪ್ಪಳ: ಮೂಸೋಡಿಯಲ್ಲಿ ಇತ್ತೀಚೆಗೆ ಒಂದು ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಇನ್ನೊಂದು ಮನೆ ಸಮುದ್ರ ಪಾಲಾಗುತ್ತಿದೆ.  ಕಡಲ್ಕೊರೆತ ವ್ಯಾಪಕಗೊಂಡಿರುವAತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂಸೋಡಿಯಲ್ಲಿ ಇಸ್ಮಾಯಿಲ್ ಎಂಬವರ ಮನೆ ಸಮುದ್ರದ ಅಲೆಗೆ ಕೊಚ್ಚಿಹೋಗಲು ಆರಂಭಗೊoಡಿದೆ.  ಜುಲೈ 21ರಿಂದ ಸಂಜೆಯಿoದ  ವ್ಯಾಪಕ ಕಡಲ್ಕೊರೆತ ಉಂಟಾಗಿದ್ದು, ಮನೆಯ ಅಡಿಪಾಯ  ಕೊರೆದು  ಲೇಜ್, ಫಿಶರೀಸ್ ಅಧಿಕಾರಿಗಳು ತಲುಪಿ ಪರಿಶೀಲಿಸಿದ್ದು, ಕುಟುಂಬವನ್ನು ಬೇರೆಡೆಗೆ  ಸ್ಥಳಾಂತರಿಸಲಾಗಿದೆ.  ಎಲ್ಲಾ ಅಧಿಕಾರಿಗಳು ತಲುಪಿದ್ದರೂ  ಪಂಚಾಯತ್ ಅಧಿಕಾರಿಗಳು ಮಾತ್ರ ಬರಲಿಲ್ಲವೆಂದು ಕುಟುಂಬ ಸಹಿತ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಪರಿಸರದಲ್ಲೇ ಇತ್ತೀಚೆಗೆ ಮೂಸಾ ಎಂಬವರ ಮನೆ ಸಮುದ್ರಪಾಲಾಗಿದೆ. ಇದೀಗ ಇನ್ನೂ ಹಲವು ಮನೆಗಳು ಅಪಾಯದಂಚಿನಲ್ಲಿದ್ದು, ಇವರನ್ನು  ಈ ಹಿಂದೆ ಸಂಬoಧಿಕರ ಮನೆಗೆ ಸ್ಥಳಾಂತರಗೊoಡಿದೆ.


Share with

Leave a Reply

Your email address will not be published. Required fields are marked *