ಐಲ ಮೈದಾನವನ್ನು ಸಂರಕ್ಷಿಸಲು ಭಕ್ತರ ಸಮಾವೇಶ

Share with

ಉಪ್ಪಳ :ಇತಿಹಾಸ ಪ್ರಸಿದ್ಧ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಉತ್ಸವಾಂಗಣವಾದ ಐಲ ಮೈದಾನವನ್ನು ಸಂರಕ್ಷಿಸುವ ಸಲುವಾಗಿ ಕ್ಷೇತ್ರದಲ್ಲಿ ಭಕ್ತರ ಸಮಾವೇಶ ಜುಲೈ 21ರಂದು ನಡೆಯಿತು.ಕೇರಳ ಸರಕಾರದ ಕಚೇರಿಗಳನ್ನು ಐಲ ಮೈದಾನದಲ್ಲಿ ಸ್ಥಾಪಿಸುವ ಬಗ್ಗೆ ಈಗಾಗಲೇ ನಕ್ಷೆ ತಯಾರಿಸುವ ಅಧಿಕಾರಿಗಳ ಸ್ಥಳ ಪರೀಕ್ಷಣೆಯನ್ನು ವಿರೋಧಿಸುವ ಬಗ್ಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದ ಸಭಾoಗಣದಲ್ಲಿ ಸೇರಿದ್ದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ನಮ್ಮ ನೆಲ,ನಮ್ಮ ಜಲ ನಮ್ಮ ಸಂಸ್ಕೃತಿ ಉಳಿಸೋಣ ಜಾಗೃತ್ತಿಗೊಳಿಸೋಣ ರಾಜಕೀಯ ಬಿಟ್ಟು ಒಂದಾಗೋಣ ಎಂದು ಆಶೀರ್ವಾದದ ನುಡಿಗಳನ್ನು ಆಡಿದರು. ಶ್ರೀ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಶ್ರೀ ಎಡನೀರು ಮಠ ಹಾಗೂ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಮಠ ಇವರ ಚಾತುರ್ಮಾಸ್ಯ ವ್ರತಾ ಚರಣೆಯಲ್ಲಿ ಇದ್ದುದರಿಂದ ಇವರ ಸಂದೇಶವನ್ನು ವಾಚಿಸಲಾಯಿತು.
ಪ್ರಧಾನ ಭಾಷಣ ಕಾರರದ ರವೀಶ ತಂತ್ರಿ ಕುಂಟಾರು ಇವರು ಹಿಂದೂ ಧರ್ಮದ ಬಗ್ಗೆ ಪ್ರಪಂಚದ ನಾನಾ ಭಾಗಗಳಲ್ಲಿ ಬಹಳ ಗೌರವವಿದೆ.ನಾವು ಇಲ್ಲಿ ಬಿಕ್ಕಟ್ಟನ್ನು ತೊರೆದು ಒಗ್ಗಟ್ಟನ್ನು ಪ್ರದರ್ಶಿಸಬೇಕು.ಹಿಂದಿನವರು ಮಾಡಿದ ತಪ್ಪುಗಳನ್ನು ಎತ್ತಿ ತೋರಿಸದೆ ಎದ್ದು ಪ್ರತಿಭಟಿಸಲು ಸಜ್ಜಾಗಬೇಕು.ಐಲದ ಉತ್ಸವ ಮೈದಾನವನ್ನು ಯಾವ ಬೆಲೆ ತೆತ್ತಾದರೂ ಉಳಿಸಲು ಬದ್ದರಾಗಬೇಕು ಎಂದು ಕರೆ ನೀಡಿದರು.
ಮಲಬಾರ್ ದೇವಸ್ವo ಬೋರ್ಡ್ ಏರಿಯಾ ಕಮಿಟಿ ಸದಸ್ಯರಾದ ಶಂಕರ ರೈ ಮಾಸ್ತರರು ಐಲ ಮೈದಾನದಲ್ಲಿ ಯಾವುದೇ ಸರಕಾರಿ ಕಚೇರಿ ಬರುವ ಬಗ್ಗೆ ಕಳವಳ ಬೇಡ…ಸರಕಾರ ಅದನ್ನು ಕೈ ಬಿಟ್ಟಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ಬಯ್ಯ ರೈಗಳು ವಹಿಸಿ ಯಾವುದೇ ರೀತಿಯ ಕಾನೂನಾತ್ಮಕ ಸಾಮಾಜಿಕ ಹೋರಾಟಕ್ಕೆ ನಾವು ಸಿದ್ಧರಾಗಬೇಕೆಂದು ತಿಳಿಸಿದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಕಣ್ಣೂರು ವಿಭಾಗ ಕಾಯವಾಹ ಲೋಕೇಶ ಜೋಡುಕಲ್ಲು , ಬಿಜೆಪಿ ಯ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಮಂಜುನಾಥ ಆಳ್ವ ಮಡ್ವ, ಜಯರಾಮ , ಬಾಲಕೃಷ್ಣ ವಾನಂದೆ , ವಿಜಯ ಕುಮಾರ್ , ಮೀರಾ ಆಳ್ವ, ಅಶೋಕ್ ಪೂಜಾರಿ ಲಾಲ್ ಬಾಗ್, ರಾಮಕೃಷ್ಣ ಕಡಂಬಾರ್ ಇವರು ಮಾತನಾಡಿ
ಐಲ ಮೈದಾನ್ ಉಳಿಸಲು ಯಾವುದೇ ಕಾರ್ಯಕ್ಕೂ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಭರವಸೆ ಇತ್ತರು. ಮಾಗಣೆ ಪ್ರಮುಖರು ವೇದಿಕೆಯಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಆಸೀನರಾದ ಭಕ್ತರ ಅಭಿಪ್ರಾಯಗಳನ್ನು ಸ್ವೀಕರಿಸಲಾಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ ಯವರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಮೋಹನದಾಸ ಐಲ ವಂದಿಸಿದರು.ಕಮಲಾಕ್ಷ ಐಲ ನಿರೂಪಿಸಿದರು.


Share with

Leave a Reply

Your email address will not be published. Required fields are marked *