ಪ್ರಕೃತಿಯ ಮಡಿಲಲ್ಲಿ ನಡೆಯುವ ಕೆಲವೊಂದು ವಿಸ್ಮಯ ಸಂಗತಿಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ. ಇದೀಗ ಅಂತಹದೊಂದು ರೋಮಾಂಚನಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮಳೆಯಿಂದ ನದಿ ತುಂಬಿ ಹರಿದು ಆ ಪ್ರವಾಹದ ನೀರಿನಿಂದ ತೋಟ ಮುಳುಗಿದರೂ, ಆ ತೋಟದಲ್ಲಿ ಇರುವಂತಹ ಬಾವಿಯ ನೀರು ಮಾತ್ರ ತಿಳಿಯಾಗಿಯೇ ಇದೆ. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.
ಈ ಬಾರೀ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಗಾರು ಆರ್ಭಟಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಸಾವು ನೋವುಗಳು ಕೂಡಾ ಸಂಭವಿಸಿದೆ. ಇನ್ನೂ ಮಳೆಗಾಲದಲ್ಲಿ ನದಿ-ಹೊಳೆ ನೀರು ಕೆಸರು ಬಣ್ಣಕ್ಕೆ ತಿರುಗುವುದು ಸರ್ವೆಸಾಮಾನ್ಯ. ಅಷ್ಟೇ ಅಲ್ಲದೆ ಬಾವಿ ನೀರು ಕೂಡಾ ಕೊಂಚ ಕೆಸರು ಬಣ್ಣಕ್ಕೆ ತಿರುಗುತ್ತವೆ. ಅಂತದ್ರಲ್ಲಿ ಇಲ್ಲೊಂದು ವಿಸ್ಮಯ ನಡೆದಿದ್ದು, ಭಾರೀ ಮಳೆಗೆ ನದಿ ಹೊಳೆ ತುಂಬಿ ಹರಿದು ತೋಟ ಮುಳುಗಿದರೂ, ಆ ತೋಟದಲ್ಲಿರುವ ಬಾವಿ ನೀರಿಗೆ ಕೆಸರು ನೀರು ಸೋಕದೆ, ಆ ನೀರು ಸ್ವಚ್ಛಂದವಾಗಿ, ತಿಳಿಯಾಗಿಯೇ ಇತ್ತು. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.