ಉಪ್ಪಳ: ಹಿಂದೂ ಐಕ್ಯವೇದಿ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಕುಟುಂಬ ಸಂಗಮ ಕಾರ್ಯಕ್ರಮ ಪ್ರತಾಪನಗರ ಶ್ರೀ ಗೌರಿಗಣೇಶ ಮಂದಿರ ಜರಗಿತು. ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಹಿಂ.ಐ.ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಸುರೇಶ್.ಜಿ. ಮಂಗಲ್ಪಾಡಿ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಪಿ ಹರಿದಾಸ್ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಉದ್ಯೋಗವನ್ನು ಪಡೆಯುವ ಒಂದು ಸಾಧನವಾಗಿ ಮರ‍್ಪಟಿದೆ,ಸನಾತನ ಧರ್ಮದ ಅಭ್ಯುದಯಕ್ಕಾಗಿ ಶ್ರಮಿಸಿರುವ ಶಂಕರಾಚಾರ್ಯರ ಜನ್ಮಸ್ಥಾನವು ಕೇರಳದ ಕಾಲಡಿ ಪ್ರತಿಯೊಬ್ಬ ಹಿಂದುವಿಗು ಪುಣ್ಯ ಕ್ಷೇತ್ರ ವಾಗಿದೆ.ಹಿಂದು ಸಮಾಜವು ಹಲವಾರು ಸಮಸ್ಯೆಗಳನ್ನು ಸಂಘಟಿತವಾಗಿ ಎದುರಿಸ ಬೇಕಾಗಿರುವುದು ಕಾಲಘಟ್ಟದ ಅನಿವರ‍್ಯ ವಾಗಿದೆ ಎಂದು ನುಡಿದರು. ಹಿಂದೂ ಐಕ್ಯವೇದಿಯ ಜಿಲ್ಲಾ ಅದ್ಯಕ್ಷ ಯಸ್.ಪಿ. ಶಾಜಿ, ಮತ್ತು ಸ್ಥಳಿಯ ಜನ ಪ್ರತಿನಿಧಿ ಸುಧಾ ಗಣೇಶ್ ಶುಭಾಶಂಸೆನೆ ನೀಡಿದರು .ಹಿಂದೂ ಐಕ್ಯವೇದಿ ಜಿಲ್ಲಾನೇತಾರ ರಾದ ರಾಜನ್ ಮುಳಿಯಾರ್, ಸುದಾಕರನ್, ತಾಲೂಕು ಉಪಾಧ್ಯಕ್ಷ ಸುರೇಶ್ ಶಟ್ಟಿ ಪ್ರತಾಪ್ ನಗರ, ತಾಲೂಕು ಕೋಶಾದಿಕಾರಿ ಸುದೀಪ್ ಗಟ್ಟಿ ಕುಂಬಳೆ, ಸಂಘ ಪರಿವಾರದ ನೇತಾರಾದ ವಸಂತ ಮಯ್ಯ,ವಲ್ಸರಾಜ್,ಶ್ರೀ ಜಿತ್,ಮಾದಲಾದವರು ಉಪಸ್ಥಿತರಿದ್ದರು. ದಿವಾಕರ ಪ್ರತಾಪನಗರ ಸ್ವಾಗತಿಸಿ, ,ಪ್ರವೀಣ್ ಪ್ರತಾಪ್ ನಗರ ಧನ್ಯವಾದ ವಿತ್ತರು.