ಉಪ್ಪಳ: ಕಡಲ್ಕೊರೆತ ವ್ಯಾಪಕಗೊಂಡಿದ್ದು, ಉಪ್ಪಳ ಬಳಿಯ ಐಲ ಬಂಗ್ಲ ಎಂಬಲ್ಲಿ ಮೀನುಗಾರಿಕೆಯ ಬಲೆಗಳನ್ನು ಸಂಗ್ರಹಿಸುವ ಶೆಡ್ಡ್ ಸಮುದ್ರಪಾಲಾಗುವ ಸಾಧ್ಯತೆಯಿದ್ದು, ಹಲವಾರು ಗಾಳಿ ಮರಗಳು ನೀರು ಪಾಲಾಗಿದೆ. ಬಲೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದ ಮೀನುಗಾರರು ಆತಂಕಕೊಳ್ಳಗಾಗಿದ್ದಾರೆ. ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಸಮುದ್ರ ಅಲೆಗಳ ಆರ್ಭಟ ಹೆಚ್ಚಾಗ ತೊಡಗಿದ್ದು, ಇದರಿಂದ ಮೀನುಗಾರರು ಸಂಗ್ರಹಿಸಿಡುತ್ತಿದ್ದ ಕಾಂಕ್ರೀಟ್ ಶೆಡ್ಡ್ ಸಮುದ್ರ ಪಾಲಾಗುವ ಭೀತಿ ಉಂಟಾಗಿದೆ. ಕಳೆದ ಏಳು ವರ್ಷಗಳ ಹಿಂದೆ ಮೀನು ಕಾರ್ಮಿಕರಿಗೆ ಪಂಚಾಯತ್ ನಿರ್ಮಿಸಲಾದ ಶೆಡ್ಡ್ ಇದಾಗಿದೆ. ಇಲ್ಲಿನ ರಸ್ತೆ ಕೂಡಾ ಅಪಾಯದಂಚಿನಲ್ಲಿದೆ. ಹನುಮಾನ್ನಗರ, ಮೂಸೋಡಿ, ಶಾರದಾನಗರದಲ್ಲೂ ಕಡಲ್ಕೊರೆತ ಮುಂದುವರಿಯುತ್ತಿದೆ.